ಕಾರ್ಕಳ : ಶ್ರೀ ಕ್ಷೇತ್ರ ಕುಂಟಾಡಿ, ಶ್ರೀ ರಕ್ತೇಶ್ವರಿ ದೈವಸ್ಥಾನ ಸನ್ನಿಧಾನದಲ್ಲಿ ಶ್ರೀ ರಕ್ತೇಶ್ವರಿ ಮತ್ತು ವ್ಯಾಘ್ರ ಚಾಮುಂಡಿ ದೈವಗಳ ಗಡುವಾಡು ನೇಮೋತ್ಸವವು ಮಾ. 27ರ ರವಿವಾರ ಜರುಗಲಿದೆ.
ವೇದಮೂರ್ತಿ ಪುತ್ತೂರು ಶ್ರೀ ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಪೂರ್ವಾಹ್ನ 8. 15ಕ್ಕೆ ಹಿರ್ತಬೆಟ್ಟು ಗುತ್ತುವಿನಿಂದ ದೈವಗಳ ಭಂಡಾರ ಹೊರಡುವುದು, 9.55 ಕ್ಕೆ ಗ್ರಾಮಸ್ಥರು ಹಾಗೂ ಶ್ರೀ ದೈವಗಳ ಸಹಿತ ಏಕಕಾಲದಲ್ಲಿ ಬಂಜನಡ್ಕ ತಾವಿನ ನೇಮೋತ್ಸವ ಕಲಕ್ಕೆ ಪ್ರವೇಶಿಸುವುದು, 10.5ಕ್ಕೆ ಕಂಬದ ಸ್ಥಾಪನೆ, 10.25 ಸಮಯಕ್ಕೆ ತೋರಣ ಮುಹೂರ್ತ, 11 ಗಂಟೆಗೆ ನವಕ ಪ್ರಧಾನ ಹೋಮ, 11.30ರಿಂದ ಕಲಶಾಭಿಷೇಕ, 12 ಗಂಟೆಗೆ ಮಹಾಪೂಜೆ, 12.30ರಿಂದ ನಂದಿಗೋಣ ನೇಮ, 1 ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 9.00ಕ್ಕೆ ಮಹಾಪೂಜೆ ಬಳಿಕ ದೈವಗಳ ನೇಮೋತ್ಸವ ಪ್ರಾರಂಭವಾಗಲಿರುವುದು. ಮಾ. 28 ರಂದು ದೈವಗಳ ಭಂಡಾರದ ನಿರ್ಗಮನ ಮತ್ತು ಮಾ. 29ರಂದು ರಾತ್ರಿ ಗಂಟೆ 7.30ಕ್ಕೆ ಗೊಂದುಲು ಸೇವೆ ಮತ್ತು ಹೊಳೆಪೂಜೆ ಜರುಗಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.
60 ವರ್ಷಕ್ಕೊಮ್ಮೆ ನಡೆಯುವ ಗಡುವಾಡು ನೇಮೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ. ಮುಂಬೈ, ಪುಣೆಯಲ್ಲಿ ನೆಲೆಸಿರುವ ನಿಟ್ಟೆ, ಕಲ್ಯಾ ಗ್ರಾಮದವರೂ ನೇಮೋತ್ಸವದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಊರಿಗೆ ಆಗಮಿಸಿದ್ದಾರೆ.
ಮಾ. 27 : ಕುಂಟಾಡಿ ಕ್ಷೇತ್ರದಲ್ಲಿ ಗಡುವಾಡು ನೇಮೋತ್ಸವ
Recent Comments
ಕಗ್ಗದ ಸಂದೇಶ
on