ಕಾರ್ಕಳ : ದುರ್ಗಾ ಗ್ರಾ.ಪಂ. ವ್ಯಾಪ್ತಿಯ ದುರ್ಗ – ಕಡಂಬಳ ರಸ್ತೆ ಮಧ್ಯೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ವತಿಯಿಂದ ನಿರ್ಮಾಣವಾದ ತಡೆಗೋಡೆ ವರ್ಷದೊಳಗಡೆ ನೆಲಸಮಗೊಂಡಿದೆ. ದುರ್ಗ – ಕಡಂಬಳದ ಮಧ್ಯೆ ತಡೆಗೋಡೆಯೊಂದು ನಿರ್ಮಾಣವಾಗಿ ಅದು ಒಂದು ಮಳೆಗಾಲವೂ ಕೂಡ ದಾಟದೇ ಕುಸಿದು ಬಿದ್ದಿದೆ. ಹೀಗಾಗಿ ಸರಕಾರ ಹಣ ವೃಥಾ ಪೋಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
20 ಲಕ್ಷ ರೂ. ವೆಚ್ಚ
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ದುರ್ಗ ಪಂಚಾಯತ್ ನಿಂದ ಹಡ್ಯಾಲುವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಈ ರಸ್ತೆಯ ಒಂದು ಕಡೆ ಸುಮಾರು 20 ಮೀಟರ್ ಉದ್ದ, 5 ಮೀಟರ್ ಎತ್ತರದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣವಾಗಿತ್ತು. ಕಳಪೆ ಕಾಮಗಾರಿಯಿಂದಾಗಿ ತಡೆಗೋಡೆ ನೆಲಸಮವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ನ್ಯೂಸ್ ಕಾರ್ಕಳ ಪಂಚಾಯತ್ ಅನ್ನು ಸಂಪರ್ಕಿಸಿದಾಗ ಇದು ದುರ್ಗ ಗ್ರಾ.ಪಂ. ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಯಲ್ಲ. ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯು ಪಂಚಾಯತ್ಗೆ ಮಾಹಿತಿ ನೀಡಿರುವುದಿಲ್ಲ. ಸಾರ್ವಜನಿಕರ ದೂರಿನ ಮೇರೆಗೆ ಇಂಜಿನಿಯರ್ ಅವರನ್ನು ಸಂಪರ್ಕಿಸಿದಾಗ ಅವರು ಸ್ಪಂದಿಸಿಲ್ಲ ಎಂದು ತಿಳಿಸಿದ್ದಾರೆ.
