ಹಾಸನ: ಕೆಎಸ್ಆರ್ ಟಿಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಭೀಕರ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಮಾ. 22ರಂದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಸಂಕೇನಹಳ್ಳಿ ತಿರುವಿನಲ್ಲಿ ನಡೆದಿದೆ.
ಬೇಲೂರಿನ ನಿವಾಸಿಗಳಾದ ಅಕ್ಮಲ್, ಜೆಲಾನಿ, ಖೈಫ್, ಮೋಹಿನ್, ಮತ್ತು ರಿಯಾನ್ ಮೃತ ದುರ್ದೈವಿಗಳು. ಮೋಹಿನ್ ಮತ್ತು ರಿಯಾನ್ ಹಾಸನದ ಎನ್ ಡಿಆರ್ ಕೆ ಕಾಲೇಜಿನಲ್ಲಿ ಪದವಿ ಓದುತ್ತಿದ್ದು, ಮೊಹಮ್ಮದ್ ಖೈಫ್, ಮಹಮ್ಮದ್ ಜಿಲಾನಿ, ಮತ್ತು ಅಕ್ಮಲ್ ಬೇಲೂರಿನ ವಿದ್ಯಾ ವಿಕಾಸ ಕಾಲೇಜಿನ ವಿದ್ಯಾರ್ಥಿಗಳು. ಇವರೆಲ್ಲ ಕಾಲೇಜು ಮುಗಿಸಿ ಕಾರಿನಲ್ಲಿ ಹಾಸನದತ್ತ ಹೊರಟಿದ್ದರು. ಈ ವೇಳೆ ಚಿಕ್ಕಮಗಳೂರಿನತ್ತ ಹೊರಟಿದ್ದ ಸಾರಿಗೆ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತ ಪಟ್ಟಿದ್ದು, ಗಂಭೀರಗೊಂಡಿದ್ದ ಓರ್ವನನ್ನು ಆಸ್ಪತ್ರೆಗೆ ಕರೆದೊಯುಯುತ್ತಿದ್ದಾಗ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ. ಇನ್ನು ಬಸ್ ನಲ್ಲಿದ್ದ ಹಲವರಿಗೆ ಗಾಯಗಳಾಗಿವೆ.
ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದು, ಒಂದು ತಾಸಿನ ವರೆಗೆ ಮೃತರ ಗುರುತು ಪತ್ತೆಯಾಗಿರಲಿಲ್ಲ. ಮತ್ತಷ್ಟು ಪರಿಶಿಲನೆಯ ನಂತರ ಓರ್ವನ ಕಾಲೇಜು ಐಡಿ ದೊರೆತದ್ದರಿಂದ ಮೃತರ ಗುರುತು ದೊರೆತಿದೆ.
ಕೆಎಸ್ಆರ್ಟಿಸಿ ಬಸ್- ಕಾರು ಮುಖಾಮುಖಿ ಡಿಕ್ಕಿ
Recent Comments
ಕಗ್ಗದ ಸಂದೇಶ
on