Tuesday, May 17, 2022
spot_img
Homeವಿದೇಶಚೀನಾ : 133 ಪ್ರಯಾಣಿಕರಿದ್ದ ವಿಮಾನ ಪತನ

ಚೀನಾ : 133 ಪ್ರಯಾಣಿಕರಿದ್ದ ವಿಮಾನ ಪತನ

ಬೀಜಿಂಗ್: ಚೀನಾದಲ್ಲಿ 133 ಜನ ಪ್ರಯಾಣಿಸುತ್ತಿದ್ದ ವಿಮಾನವೊಂದು ದಕ್ಷಿಣ ಪ್ರಾಂತ್ಯದ ಗುವಾಂಗ್ಸಿಯಲ್ಲಿ ಮಾ. 21ರಂದು ಪತನಗೊಂಡಿದ್ದು, ಪರ್ವತದ ಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಚೀನಾ ಈಸ್ಟರ್ನ್​ ಏರ್​ಲೈನ್ಸ್​ಗೆ ಸೇರಿದ ಬೋಯಿಂಗ್​ 737-800 ವಿಮಾನ MU5735 ವಿಮಾನ ಟೆಂಗ್ ಕೌಂಟಿಯ ವುಝೌ ನಗರದ ಬಳಿ ಅಪಘಾತಕ್ಕೀಡಾಗಿದೆ. ಇದು ಸುಮಾರು ಆರು ವರ್ಷ ಹಳೆ ವಿಮಾನವಾಗಿದ್ದು, ಅಪಘಾತದಲ್ಲಿ ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದ್ದು, ತಕ್ಷಣಕ್ಕೆ ಮೃತಪಟ್ಟವರ ಮತ್ತು ಗಾಯಗೊಂಡವರ ಸಂಖ್ಯೆಯ ಬಗ್ಗೆ ಮಾಹಿತಿ ದೊರೆತಿಲ್ಲ.
ಈ ವಿಮಾನ ಕನ್ಮಿಂಗ್‌ ನಿಂದ ಗುವಾಂಗ್ಸಿ ನಗರಕ್ಕೆ ತೆರಳುತ್ತಿತ್ತು. ಆದರೆ, ನಿಗದಿತ ಸಮಯಕ್ಕೆ ಗುವಾಂಗ್ಸಿ ನಗರಕ್ಕೆ ವಿಮಾನ ತಲುಪಿಲ್ಲ, ಮಧ್ಯಾಹ್ನ 1 ಗಂಟೆಗೆ ವಿಮಾನ ಪತನವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!