ಕಾರ್ಕಳ : ಸಾಣೂರು ಗ್ರಾಮದ ಪರ್ಪಲೆ ಬಳಿ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಘಟನೆ ಮಾ. 20ರಂದು ಸಂಭವಿಸಿದ್ದು, ಪರಿಣಾಮ ಬೈಕ್ ಸವಾರ ದಿನೇಶ್ ಗಾಯಗೊಂಡಿರುತ್ತಾನೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ರೇಶ್ಮಾ ಅವರು ಚಲಾಯಿಸುತ್ತಿದ್ದ ಕಾರಿಗೆ ಬೈಕ್ ಡಿಕ್ಕಿಯಾಗಿದೆ. ಗಾಯಾಳು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಕಪ್ – ಬೈಕ್ ಡಿಕ್ಕಿ : ಸವಾರರಿಗೆ ಗಾಯ
ಕಾರ್ಕಳ : ಕುಕ್ಕುಂದೂರು ಗ್ರಾಮದ ಜಾರ್ಕಳದಲ್ಲಿ ಪಿಕಪ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ಮಾ. 19ರಂದು ನಡೆದಿದ್ದು, ಪರಿಣಾಮ ಬೈಕ್ ಸವಾರರು ಗಾಯಗೊಂಡಿರುತ್ತಾರೆ.
ಬೈಕ್ ಸವಾರ ಮಂಜೇಶ್ ಸಹಸವಾರ ಸುರೇಶರೊಂದಿಗೆ ಜಾರ್ಕಳಕ್ಕೆ ಸಾಗುತ್ತಿದ್ದಾಗ ಬೈಲೂರಿನಿಂದ ಕಾರ್ಕಳದ ಕಡೆಗೆ ಚಲಿಸುತ್ತಿದ್ದ ಪಿಕಪ್ ಡಿಕ್ಕಿಯಾಗಿ ಸವಾರರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಪರಿಣಾಮ ಸಹ ಸವಾರ ಸುರೇಶ ಅವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಮಂಜೇಶ ಅವರಿಗೆ ತರಚಿದ ಗಾಯವಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.