ಕಾರ್ಕಳ : ಕಾರ್ಕಳ ಉತ್ಸವದ 11ನೇ ದಿನ ಮಾ. 20 ರಂದು ಸಾಂಸ್ಕೃತಿಕ ಕಾರ್ಯಕ್ರಮ ಸ್ವರಾಜ್ ಮೈದಾನದಲ್ಲಿ ಸಂಜೆ 6 ಗಂಟೆಯಿಂದ 9.30ರ ವರೆಗೆ ನಡೆಯಲಿರುವುದು. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ, ಸಂಜೆ 9.30 ರಿಂದ 11 ಗಂಟೆಯವರೆಗೆ ಬೆಂಗಳೂರಿನ ಪ್ರಭಾತ್ ಕಲಾವಿದರಿಂದ ಕರುನಾಡ ವೈಭವ, ರಾತ್ರಿ 11 ಗಂಟೆಗೆ ಸಿಡಿಮದ್ದು ಪ್ರದರ್ಶನವು ನಡೆಯಲಿದೆ. ಸ್ವರಾಜ್ ಮೈದಾನದ ವಸ್ತು ಪ್ರದರ್ಶನ ಪ್ರವೇಶ ದ್ವಾರದ ಬಳಿಯಿರುವ ಜಿನರಾಜ್ ಹೆಗ್ಡೆ ವೇದಿಕೆಯಲ್ಲಿ ಸಂಜೆ 6.30 ರಿಂದ ಹುಬ್ಬಳ್ಳಿಯ ಸಮರ್ಥ ದೇಸಾಯಿ ನೇತೃತ್ವದ ಫ್ಯುಶನ್ ಬ್ಯಾಂಡ್ ತಂಡದಿಂದ ಸಿತಾರ – ಗಿಟಾರ ಜುಗಲಬಂದಿ ಕಾರ್ಯಕ್ರಮ ಜರುಗಲಿದೆ.
Recent Comments
ಕಗ್ಗದ ಸಂದೇಶ
on