ಕಾರ್ಕಳ : ದಕ್ಷಿಣ ಕನ್ನಡ ಜಿಲ್ಲಾ ಮಾಧ್ಯಮ ಮಿತ್ರ ವೃಂದದವರಿಂದ “ಭಾರ್ಗವ ವಿಜಯ” ಯಕ್ಷಗಾನ ಬಯಲಾಟ ಬಸ್ ನಿಲ್ದಾಣದ ಉಪವೇದಿಕೆಯಲ್ಲಿ ಮಾ. 19ರ ರಾತ್ರಿ 8.50ರಿಂದ ನಡೆಯಲಿದೆ.
ರಾಮಚಂದ್ರ ಭಟ್ ಎಲ್ಲೂರು ನಿರ್ದೇಶನದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಸಂಚಾಲಕತ್ವದಲ್ಲಿ ಯಕ್ಷಗಾನ ನಡೆಯಲಿದ್ದು, ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವತರಾದ ಶಿವಶಂಕರ ಬಲಿಪ, ಕೃಷ್ಣರಾಜ ನಂದಳಿಕೆ, ಅನಿರುದ್ಧ ಅತ್ತಾವರ, ಮುಮ್ಮೇಳದಲ್ಲಿ ಅಂಕಣಕಾರ ನಾ. ಕಾರಂತ ಪೆರಾಜೆ, ಜಿತೇಂದ್ರ ಕುಂದೇಶ್ವರ, ಹಿರಿಯ ಪತ್ರಕಕರ್ತರಾದ ಹರ್ಷ, ರಾಘವ ಎಂ. ಯಾದವ ಮೊದಲಾದವರು ಭಾಗವಹಿಸುವರು.
ಬಸ್ ಸ್ಟ್ಯಾಂಡ್ ಉಪವೇದಿಕೆಯಲ್ಲಿ ಭಾರ್ಗವ ವಿಜಯ ಯಕ್ಷಗಾನ
Recent Comments
ಕಗ್ಗದ ಸಂದೇಶ
on