Thursday, May 19, 2022
spot_img
Homeಸುದ್ದಿಆಕರ್ಷಕ ಉತ್ಸವ ಮೆರವಣಿಗೆ, ಜನಜಂಗುಳಿ

ಆಕರ್ಷಕ ಉತ್ಸವ ಮೆರವಣಿಗೆ, ಜನಜಂಗುಳಿ

ಕಾರ್ಕಳ : ಕಾರ್ಕಳ ಉತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ ಉತ್ಸವ ಮೆರವಣಿಗೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು.

ಸ್ವರಾಜ್ ಮೈದಾನದಿಂದ ಆರಂಭಗೊಂಡು ಬಂಡೀಮಠ, ಸಾಲ್ಮರ, ರಥಬೀದಿ, ಮೂರು ಮಾರ್ಗ, ವಿಸ್ಕೃತ ಬಸ್‌ನಿಲ್ದಾಣ, ಅನಂತಶಯನ ರಸ್ತೆ ಮೂಲಕ ಸಾಗಿ 3 ಕಿ.ಮೀ ದೂರದ ಸ್ವರಾಜ್ ಮೈದಾನದ ತನಕ ಮೆರವಣಿಗೆ ಸಾಗಿತು. ನಗರದ ರಸ್ತೆಯ ಇಕ್ಕೆಲಗಳಲ್ಲಿ ಮೆರವಣಿಗೆಯನ್ನು ವೀಕ್ಷಿಸಲು ಜನಸಂದಣಿ ಸೇರಿದ್ದು ಎಲ್ಲೆಲ್ಲೂ ಜನ ಸಾಗರವೇ ಕಾಣುತ್ತಿತ್ತು.

ಮೆರವಣಿಗೆಯಲ್ಲಿ ನೂರಕ್ಕೂ ಮಿಕ್ಕಿದ ಕಲಾತಂಡಗಳ 10 ಸಾವಿರ ಮಂದಿ ಕಲಾವಿದರು ತಮ್ಮ ಕಲಾ ಪ್ರದರ್ಶನ ನೀಡಿ ಜನರನ್ನು ರಂಜಿಸಿದರು. ಪ್ರತಿ ಜಿಲ್ಲೆಗಳ ಎರಡು ಕಲಾತಂಡಗಳು ಸೇರಿದಂತೆ ನಾನಾ ರಾಜ್ಯಗಳಿಂದ ಕಲಾವಿದರು ಮುಖ್ಯವಾಗಿ ಗುಜರಾತ್, ಮಧ್ಯಪ್ರದೇಶ, ಒಡಿಸ್ಸಾ, ರಾಜಸ್ಥಾನದ ಚಡಾಯ್ ತೇರಾತಲ್ಲಿ, ಕಾಶ್ಮೀರದ ರೌಫ್ ವಚನಾಗಿಮಾ, ಮಹಾರಾಷ್ಟ್ರದ ತರ್ಪಾ ತಂಡ, ಪಾಂಚ್ ಪಂಟರ್ಸ, ಸಿಂಹರಾಜ, ವಿಚಿತ್ರಮಾನವ, ಶಿವ ತಾಂಡವ, ಗೂಳಿಕಟ್ಟಪ, ಆಂಜನೇಯ, ಮರಗಾಲು, ದಾಸಯ್ಯ, ನಂದಿಧ್ವಜ, ವೀರಭದ್ರನ ಕುಣಿತ, ಕಹಳೆ, ಪೂಜಾ ಕುಣಿತ, ಗೊರವರ ಕುಣಿತ, ಸೋಮನ ಕುಣಿತ, ಪುರವಂತಿಕೆ, ಜಗ್ಗಳಿಕೆ ಮೇಳ, ವೀರಗಾಸೆ, ಡೊಳ್ಳು ಕುಣಿತ, ಪಟದ ಕುಣಿತ, ಪುರುಷರ ನಗಾರಿ, ಮಹಿಳೆಯರ ನಗಾರಿ, ಕರಡಿ ಮಜಲು, ಕಂಸಾಳೆ, ಪೂಜಾ ಕುಣಿತ, ಗೊಂಬೆ ಬಳಗ, ಕೇರಳದ ದೇವರ ವೇಷ, ಚಿಟ್ಟೆ ವೇಷ, ಕಾಳಿ ವೇಷ, ಪಂಚವಾದ್ಯ, ಲಾವಣಿ, ಘಟೋತ್ಕಜ, ಕಿಂಗ್‌ಕಾಂಗ್, ಊರಿನ ಚೆಂಡೆ, ಕೊಂಬು, ನಾದಸ್ವರ, ಕಥಕ್ಕಳಿ ವೇಷ, ಬಣ್ಣದ ಕೊಡೆಗಳು, ಅರ್ಧ ನಾರೀಶ್ವರ, ತಟ್ಟಿರಾಯ, ಯಕ್ಷಗಾನ ವೇಷ, ಆಳ್ವಾಸ್ ಬ್ಯಾಂಡ್‌ಸೆಟ್, ನಾಸಿಕ್ ಬ್ಯಾಂಡ್, ಶ್ರೀಲಂಕಾದ ಮುಖವಾಡ, ಆಳ್ವಾಸ್ ಡೊಳ್ಳು ಕುಣಿತ, ಲಂಗಾದ ದಾವಣಿ, ಬೇಡರ ಕುಣಿತ, ಹೊನ್ನಾವರ ಬ್ಯಾಂಡ್, ಹಗಲು ವೇಷ, ಊಸರವಲ್ಲಿ, ಸ್ಕೇಟಿಂಗ್, ಕೇರಳ ವೇಷ, ಪೂರ್ಣಕುಂಭ, ಪ್ರಾಣಿ ಪಕ್ಷಿಗಳು, ಕೊಡಗು, ಮೈಸೂರು ಪೇಟಧಾರಿಗಳು , ಇಳಕಲ್ ಸೀರೆಯುಟ್ಟ ನಾರಿಯರು, ಗುಜರಾತ್‌ನ ನಾಗರಿಕರು, ರಾಜಸ್ಥಾನದ ನಾಗರಿಕರು, ಪಂಜಾಬ್ ನಾಗರಿಕರು, ಕಾಶ್ಮೀರದ ನಾಗರಿಕರು ಈಜಿಪ್ಟ್, ಚೀನಾದ ನಾಗರಿಕರು, ಮರಾಠಾ ಸೈನಿಕರು, ಸಾಮಾನ್ಯ ಸೈನಿಕರು, ಬ್ರಿಟೀಷ್ ಸೈನಿಕರು, ಬಾಹುಬಲಿ ಸೈನಿಕರು, ಯೋಧರು, ಜೋಕರ್ಸ, ಪತಾಕೆ ಲಾಂಛನ ಹಿಡಿದ ಗುಂಪು, ಮಹಾತ್ಮರಾದ ಮಹಾತ್ಮಾ ಗಾಂಧೀಜಿ, ವಿವೇಕಾನಂದ, ಸುಭಾಸ್‌ಶ್ಚಂದ್ರ ಬೋಸ್, ಭಗತ್ ಸಿಂಗ್, ಬಾಲಗಂಗಾಧರ ತಿಲಕ್, ಶಿವಾಜಿ, ಕಿತ್ತೂರುರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ, ಝಾನ್ಸಿರಾಣಿ ಲಕ್ಷ್ಮೀಬಾಯಿ ಸೇರಿದಂತೆ ಹಲವು ತಂಡಗಳು ಭಾಗವಹಿದವು.

ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾರ್ಕಳ, ಹೆಬ್ರಿ ತಾಲ್ಲೂಕುಗಳ 34 ಗ್ರಾಮ ಪಂಚಾಯಿತಿಗಳ ಸದಸ್ಯರು ಪ್ರತ್ಯೇಕ ಸಮವಸ್ತ್ರಗಳೊಂದಿಗೆ ಭಾಗವಹಿಸಿದ್ದರು. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರು, ನವೋದಯ ಸ್ವಸಹಾಯ ಸಂಘಗಳ ಸದಸ್ಯರು, ತಾಲ್ಲೂಕಿನ ಮಹಿಳಾ ಮಂಡಲ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಜೊತೆಗೆ ತಾಲ್ಲೂಕಿನ ಶಿಕ್ಷಣ ಸಂಸ್ಥೆಗಳ ತಲಾ ಒಂದೊಂದು ತಂಡ ಮಹಾತ್ಮರ ವೇಷಭೂಷಣಗಳನ್ನು ತೊಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಪ್ರತಿ ತಂಡಗಳಲ್ಲಿ 75 ಕಲಾವಿದರು ಇದ್ದು ಅವುಗಳ ಹಿಂದೆ ಎನ್‌ಸಿಸಿಯ 500 ವಿದ್ಯಾರ್ಥಿಗಳು, ಸ್ಕೌಟ್ಸ್ ಗೈಡ್ಸ್‌ಗಳ 300 ಮಂದಿ, ವಿವಿಧ ಶಾಲೆಗಳ 250 ಮಂದಿಯ ಬ್ಯಾಂಡ್ ಸೆಟ್, ರೋವರ್‍ಸ್ ಹಾಗು ರೇಂಜರ್‍ಸ್‌ನ 300 ವಿದ್ಯಾರ್ಥಿಗಳು ಭಾಗವಹಿಸಿದ್ದರು.ರಸ್ತೆಯ ಇಕ್ಕೆಲಗಳಲ್ಲಿ ಉತ್ಸವ ಮೆರವಣಿಗೆ ವೀಕ್ಷಿಸಲು ಅಸಂಖ್ಯಾತ ಜನರು ಸೇರಿ ಮೆರವಣಿಗೆಯನ್ನು ಸ್ವಾಗತಿಸಿದರು. ಮೆರವಣಿಗೆಯುದ್ದಕ್ಕೂ ಬೆಲ್ಲ ನೀರು, ಮಜ್ಜಿಗೆ, ಜ್ಯೂಸ್ ಸೇರಿದಂತೆ ವಿವಿಧ ಪಾನೀಯಗಳ ವಿತರಣೆ ವ್ಯವಸ್ಥೆ, 40 ಸಾವಿರ ಜನಕ್ಕೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಆಳ್ವಾಸ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವ, ಮಾಜಿ ಸಚೇತಕ ಗಣೇಶ್ ಕಾರ್ಣಿಕ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಉದ್ಯಮಿ ರಘುವೀರ್ ಹುರ್ಲಾಡಿ, ಅಂತರ ರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!