Thursday, May 19, 2022
spot_img
Homeಸುದ್ದಿKarkala Utsavaಕಾರ್ಕಳ ಉತ್ಸವ : ಐತಿಹಾಸಿಕ ಉತ್ಸವ ಮೆರವಣಿಗೆಗೆ ಕ್ಷಣಗಣನೆ

ಕಾರ್ಕಳ ಉತ್ಸವ : ಐತಿಹಾಸಿಕ ಉತ್ಸವ ಮೆರವಣಿಗೆಗೆ ಕ್ಷಣಗಣನೆ

ಕಾರ್ಕಳ : ಐತಿಹಾಸಿಕ ಕಾರ್ಕಳ ಉತ್ಸವದ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ.ಉತ್ಸವ ಮೆರವಣಿಗೆಯು ಸಮಯಕ್ಕೆ ಸರಿಯಾಗಿ ಮಾ. 18ರಂದು ಸಂಜೆ 3 ಗಂಟೆಗೆ ಆರಂಭವಾಗಲಿದ್ದು,ಕೇಂದ್ರ ಸಚಿವೆ,ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಚಾಲನೆ ನೀಡಲಿದ್ದಾರೆ. ಬಂಡಿಮಠದಿಂದ ಹೊರಡುವ ಉತ್ಸವ ಮೆರವಣಿಗೆಯಲ್ಲಿ ವಿವಿಧ ಭಾಗಗಳ ನೂರಕ್ಕೂ ಮಿಕ್ಕಿ ಕಲಾತಂಡಗಳು ಪಾಲ್ಗೊಳ್ಳಲಿದೆ.ನಗರದ ಹೊರಭಾಗದಿಂದ ಬರುವವರು 2 ಗಂಟೆಗೆ ಮುಂಚಿತವಾಗಿ ನಗರ ತಲುಪಬೇಕಿದೆ.
ಬಂಡಿಮಠದಿಂದ ಸ್ವರಾಜ್‌ ಮೈದಾನದವರೆಗೆ ನಡೆಯಲಿರುವ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರಿಗೆ ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಪಾನೀಯ ವ್ಯವಸ್ಥೆ ಮಾಡಲಾಗಿದೆ. ಬೆಲ್ಲ ನೀರು, ಮಜ್ಜಿಗೆ, ಜ್ಯೂಸ್‌ ಸೇರಿದಂತೆ ವಿವಿಧ ಪಾನೀಯಗಳ ವಿತರಣೆ ಸಮಿತಿಯ ವತಿಯಿಂದ ನಡೆಯಲಿದೆ. ಇದರೊಂದಿಗೆ ನಗರದ ವರ್ತಕರೂ ಪಾನೀಯ ವ್ಯವಸ್ಥೆ ಮಾಡಿದ್ದಾರೆ. ಕಾರ್ಕಳ ಉತ್ಸವದ ಅಭೂತಪೂರ್ವ ಉತ್ಸವ ಮೆರವಣಿಗೆಯಲ್ಲಿ ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಹೊಂದಲಾಗಿದ್ದು, 10 ಸಾವಿರ ಮಂದಿ ಕಲಾವಿದರೇ ಇರಲಿದ್ದಾರೆ. 40 ಸಾವಿರ ಜನಕ್ಕೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.ಬಂಡಿಮಠದಿಂದ ಸ್ವರಾಜ್‌ ಮೈದಾನದವರೆಗೆ ಸುಮಾರು 3 ಕಿ.ಮೀ ಮೆರವಣಿಗೆ ಸಾಗಲಿದೆ.
ಒಟ್ಟು ವ್ಯವಸ್ಥೆಯ ನೇತೃತ್ವ ವಹಿಸಿರುವ ಸಚಿವ ವಿ.ಸುನೀಲ್‌ ಕುಮಾರ್‌ ಅವರು,ಬೇರೆ ಬೇರೆ ಕಡೆಗಳಿಂದ ಬರುವ ಕಲಾವಿದರು,ಪ್ರೇಕ್ಷಕರು ಸೇರಿದಂತೆ ಕಲಾಭಿಮಾನಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಕಾರ್ಯಕರ್ತರು ಗಮನಹರಿಸುವಂತೆ ಮನವಿ ಮಾಡಿದ್ದಾರೆ.
ಉತ್ಸವ ಮೆರವಣಿಗೆಯಲ್ಲಿ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾರ್ಕಳ, ಹೆಬ್ರಿ ತಾಲೂಕುಗಳ 34 ಗ್ರಾ.ಪಂ.ಗಳಿಗೂ ಒಂದೊಂದು ಬಣ್ಣ ನಿಗದಿಪಡಿಸಲಾಗಿದ್ದು, ಮಹಿಳೆಯರು, ಪುರುಷರು ಅದೇ ಬಣ್ಣದ ಬಟ್ಟೆ ತೊಟ್ಟು ಪಾಲ್ಗೊಳ್ಳುವರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರು, ನವೋದಯ ಸ್ವಸಹಾಯ ಸಂಘಗಳ ಸದಸ್ಯರು, ಯುವಕ ಮಂಡಲ, ಯುವತಿ ಮಂಡಲ, ಮಹಿಳಾ ಮಂಡಲ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ವಿಶೇಷ ವೇಷಭೂಷಣಗಳನ್ನು, ಜತೆಗೆ ತಾಲೂಕಿನ ಶಿಕ್ಷಣ ಸಂಸ್ಥೆಗಳ ವತಿಯಿಂದ ತಲಾ ಒಂದೊಂದು ತಂಡಗಳು ಮಹಾತ್ಮರ ವೇಷಗಳನ್ನು ತೊಟ್ಟು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ಮೆರವಣಿಗೆಯಲ್ಲಿ ಭಾರತ ಮಾತೆ, ಭುವನೇಶ್ವರಿ ದೇವಿಯ ಚಿತ್ರದ ಜತೆಗೆ ಕಲಾವಿದರ ತಂಡ ಮೆರವಣಿಗೆಯಲ್ಲಿ ಸಾಗಲಿದೆ.
ಉತ್ಸವ ಮೆರವಣಿಗೆಯಲ್ಲಿ ನಾಡಿನ ವಿವಿಧ ಕಲಾಪ್ರಕಾರಗಳ ಪ್ರದರ್ಶನದ ಜತೆಗೆ ಸ್ಥಳೀಯ ಕಲಾವಿದರು ಭಾಗವಹಿಸಲಿದ್ದಾರೆ.ನಮ್ಮೂರಿನ ಸಂಸ್ಕೃತಿ ವಿವಿಧ ಕಡೆಗಳಿಂದ ಬಂದ ಕಲಾವಿದರಿಗೆ ಪರಿಚಯವಾದರೆ,ವಿವಿದೆಡೆಗಳಿಂದ ಬಂದಿರುವ ಕಲಾವಿದರು ಪ್ರದರ್ಶಿಸುವ ಕಲಾಪ್ರಕಾರಗಳು ಕಾರ್ಕಳದ ಜನತೆಗೆ,ಕಲಾವಿದರಿಗೆ ಪರಿಚಯವಾಗಲಿದೆ.ಈ ಮೂಲಕ ಸಂಸ್ಕೃತಿಗಳ ಸಮ್ಮಿಲನವಾಗಲಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!