ಕಾರ್ಕಳ : ಮಜಾ ಟಾಕೀಸ್ ಖ್ಯಾತಿಯ ಮೋಹನ್ ಕಾರ್ಕಳ ಅವರ ಸಾರಥ್ಯದಲ್ಲಿ ಖ್ಯಾತ ನಿರೂಪಕ ಮನೋಹರ್ ಪ್ರಸಾದ್ ನಿರ್ವಹಣೆಯಲ್ಲಿ, ಸುಪ್ರಸಿದ್ಧ ತುಳು ಗೀತೆ ಮತ್ತು ಕನ್ನಡ ಚಿತ್ರಗೀತೆಗಳ ಜಾನಪದ ಗೀತೆಗಳ ಸಂಗೀತ ಸಂಭ್ರಮ ಕಾರ್ಯಕ್ರಮ ಮಾ. 17ರ ಸಂಜೆ 7.30 ರಿಂದ ಸ್ವರಾಜ್ ಮೈದಾನದ ವಸ್ತುಪ್ರದರ್ಶನದ ವೇದಿಕೆಯಲ್ಲಿ ನಡೆಯಲಿದೆ.
ಪ್ರಸಿದ್ಧ ಗಾಯಕರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರವೀಂದ್ರ ಪ್ರಭು, ಪ್ರಕಾಶ್ ಕಾರ್ಕಳ, ರಾಜೇಶ್ ಮಂಗಳೂರು, ಶರತ್ ಹಳೆಯಂಗಡಿ, ಪ್ರಜ್ವಲ್, ಎದೆತುಂಬಿ ಹಾಡುವೆನು ಖ್ಯಾತಿಯ ವಿದ್ವಾನ್ ಯಶವಂತ್ ಹಾಗೂ ಪಲ್ಲವಿ ಪ್ರಭು ಹಾಡಿ ರಂಜಿಸಲಿದ್ದಾರೆ.
ಕಾರ್ಕಳ ಉತ್ಸವ : ಮಾ. 17ರ ಸಂಜೆ ಸಂಗೀತ ಸಂಭ್ರಮ
