Thursday, May 26, 2022
spot_img
Homeಸುದ್ದಿKarkala Utsavaಜನತೆಯ ಜೀವನೋತ್ಸಾಹ ಹೆಚ್ಚಿಸಿದ ಕಾರ್ಕಳ ಉತ್ಸವ

ಜನತೆಯ ಜೀವನೋತ್ಸಾಹ ಹೆಚ್ಚಿಸಿದ ಕಾರ್ಕಳ ಉತ್ಸವ

ಕಾರ್ಕಳ ಉತ್ಸವ 2022 ಹತ್ತು ದಿನಗಳ ಹಬ್ಬವಾಗಿ ಜನತೆಯ ಜೀವನೋತ್ಸವ ಬಗೆಯಾಗಿ ದಿನೇ ದಿನೇ ಜನಪ್ರವಾಹ ಸಡಗರ ಸಂಭ್ರಮ ನಗರದೆಲ್ಲೆಡೆ ಕಂಡುಬರುತ್ತಿದೆ.
ಕಾರ್ಕಳ ಉತ್ಸವದಲ್ಲಿ ಜನತೆಯ ಅಭಿರುಚಿಯ ವೇದಿಕೆಯಾಗಿ ಪ್ರತಿಯೊಂದು ಕಾರ್ಯಕ್ರಮವು ಅಚ್ಚುಕಟ್ಟಾಗಿ ಮೂಡಿಬಂದಿದೆ. ಜನಸಾಗರದಲ್ಲೂ ಶಾಂತ ರೀತಿಯ ಸಂಯಮ ಶಿಸ್ತು ಮತ್ತೆ ನಗು ಚೆಲ್ಲುತ್ತಲೇ ಬಾಂಧವ್ಯವನ್ನು ವೃದ್ಧಿಗೊಳುಸುತ್ತಲೇ ಬೆಸೆಯುತ್ತಲೇ ಹಾಗೇ‌‌ನೆ ಮುಂದೆ ಸಾಗುತ್ತಾ ಎಲ್ಲಾ ಕಾರ್ಯಕ್ರಮಗಳನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.

ಕಾರ್ಕಳ ಉತ್ಸವವೂ ಉದ್ಘಾಟನೆಯಾದಲ್ಲಿಂದ ಪ್ರತಿದಿನ ವಿನೂತನವಾದ ಒಂದೊಂದು ಕಾರ್ಯಕ್ರಮಗಳ ಉದ್ಘಾಟನೆಯು ಬಹಳ ವಿಶೇಷ ವಿಷಯಗಳನ್ನು ವಿಷದವಾಗಿ ಜನರಿಗೆ ಅರ್ಥೈಯಿಸುತ್ತಿದೆ. ಮೊದಲ ದಿನ ಕಾರ್ಕಳ ಉತ್ಸವಕ್ಕೆ ಚಾಲನೆ ನೀಡುವುದರ ಮೂಲಕ ಪ್ರತೀ ದಿನದಿಂದ ಸಾಹಿತ್ಯೋತ್ಸವ,ಚಲನಚಿತ್ರೋತ್ಸವ, ದೀಪೋತ್ಸವ, ಅರಣ್ಯೋತ್ಸವ, ಗೂಡುದೀಪೋತ್ಸವ, ಶ್ವಾನ ಪ್ರದರ್ಶನೋತ್ಸವ, ಕುಣಿಯೋಣು ಬಾರಾ ಕುಣಿಯೋಣು ಬಾ…ಎಂಬಂತೆ ಡಿಜೆ ಹಾಡಿನ ಮಾಸ್ ಒಂದೆಡೆ ಇನ್ನೊಂದೆಡೆ ಆಹಾರ ಮೇಳೋತ್ಸವ ಕೈ ಬೀಸೀ ಕರೆಯುತ್ತಿದೆ. ವಸ್ತುಪ್ರದರ್ಶನೋತ್ಸವ, ಗಾಳಿಪಟೋತ್ಸವ, ಸಂಗೀತೋತ್ಸವ, ಹಾಸ್ಯೋತ್ಸವ, ನೃತ್ಯೋತ್ಸವ, ಯಕ್ಷೋತ್ಸವ, ಮೆಹೆಂದಿ ಉತ್ಸವ, ಬುಲೆಟ್ ರೈಡ್ ಹೀಗೆಯೇ..ಇನ್ನೂ ವಿಶೇಷವೆಂಬಂತೆ ಚಿತ್ರ ಸಂತೆ.

ಇಷ್ಟೆಲ್ಲಾ ಕಾರ್ಯ ಕ್ರಮಗಳಿಗೆ ಪ್ರತಿಮನಗಳನ್ನು ಸಂತಸಪಡಿಸುವ ಪ್ರತಿ ಕಣ್ಣುಗಳನ್ನು ಕೋರೈಸುವ ಬೆಳಕಿನಾಟ ವಿಶೇಷವಾದ ಮೆರುಗು ಎನ್ನಬಹುದು. ಬೆಳಗುವ ಹಣತೆಯಂತೆ ವನ್ಯಪ್ರಾಣಿಗಳ ರೂಪದಲ್ಲಿ ವಿವಿಧ ಕ್ರೀಡಾ ರೂಪಗಳು ದೇವ ದೇವತೆಗಳು ಪುರಾಣ ಪುರುಷರು ರಾಷ್ಟ್ರ ಪುರುಷರು ಅರಳಿದ ಹೂವುಗಳಂತೆ ಹರಿಯುವ ಜಲಪಾತದಂತೆ ಹಲವು ಬಣ್ಣದ ಪುಡಿಗಳನ್ನು ಎರಚಿದಂತೆ ನೀಲಿ ಸಮುದ್ರ ಹಳದಿ ಸಮುದ್ರದಂತೆ ಅದರಲ್ಲೂ ದುಂಡು ಮಲ್ಲಿಗೆ ಅರಳಿ ನಿಂತಹ ದೀಪಗಳ ಮರಗಳು ಎಲ್ಲರ ಗಮನವನ್ನು ಸೆಳೆಯುತ್ತಲೇ ಇದೆ.

ಗಾಂಧಿ ಮೈದಾನದ ಕಡೆಗೂ ಸ್ವರಾಜ್ ಮೈದಾನದ ಕಡೆಗೋ ಇಲ್ಲವೇ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಕಡೆಗೋ, ಗೊಮ್ಮಟ ಬೆಟ್ಟ ಚತುಮುರ್ಖ ಬಸದಿ, ಸದ್ಯೋಜಾತ ಪಾರ್ಕ್ ಪೇಟೆಯ ಮುಖ್ಯ ಬಸ್ ನಿಲ್ದಾಣ ದಲ್ಲಿ ಜೋಡುರಸ್ತೆಯ ದಾರಿಯ ಕಡೆಗೆ ಒಂದು ಬಾರಿ ಭೇಟಿ ನೀಡಲು ಹೊರಟರೆ ದಾರಿಯುದ್ಧಕ್ಕೂ ಫೋಟೋ ಕ್ಲಿಕಿಸದೇ ಮುಂದುವರಿಯದಿರಲು ಸಾಧ್ಯವೇ ಇಲ್ಲ.
ಜನಸಾಗರ ಬಣ್ಣ ಬಣ್ಣದ ಬಟ್ಟೆಯ ತೊಟ್ಟು ಅಲ್ಲಲ್ಲಿ ವ್ಯವಸ್ಥೆಗೊಳಿಸಿದ ಸೆಲ್ಪಿ ಕಾರ್ನರ್ ಮುಸಿ ಮುಸಿ ಮಂದಹಾಸ ಬೀರುತ್ತಲೇ ಜೊತೆಯಲಿ ಜೊತೆಯಲಿ ಎಂಬಂತೆ ತನ್ನ ಪರಿವಾರದವರೊಂದಿಗೆ ಉತ್ಸವದ ನೆನಪಿಗೆ ಸ್ಮರಣೀಯವಾದ ಒಂದು ಪೊಟೋ ಕ್ಲಿಕ್ ಅದೊಂದು ಎಲ್ಲರಲ್ಲೂ ಸಾರ್ಥಕ ಭಾವ ಮೂಡಿಸಿದೆ. ಸ್ವರಾಜ್ ಮೈದಾನದ ಅಂಚಿನಲ್ಲಿ ಪ್ರತಿ ಸಂಜೆಯಲ್ಲಿ ಜಾಯಿಂಟ್ ವೀಲ್, ತೊಟ್ಟಿಲುಗಳು ನಿತ್ಯವೂ ತೂಗಾಡುತ್ತಿದೆ..

ಎಲ್ಲವೂ ಅಚ್ಚುಕಟ್ಟು
ಶಿಸ್ತಿನ ವಿಚಾರದಲ್ಲಿ ಅಷ್ಟೇ ಕಟ್ಟುನಿಟ್ಟು .ಈ ಮಧ್ಯೆ 37 ಸಮಿತಿಗಳ ಪ್ರಬಂಧಕರ ಸಂಚಾಲಕರ ಸ್ವಯಂಸೇವಕ ಸಮಯಪ್ರಜ್ಞೆಯ ಕರ್ತವ್ಯ ನಿರ್ವಹಣೆ ಒಂದು ಮಾದರಿಯೆನಿಸಿದೆ. ಸ್ಕೌಟ್ಸ್. ಗೈಡ್ಸ್ ವಿದ್ಯಾರ್ಥಿಗಳ ರೋವರ್ ರೇಂಜರ್ಸ್ ಎನ್.ಸಿ.ಸಿ ಎನ್.ಎಸ್.ಎಸ್ ಅಂತೆಯೇ ಬೇರೆಬೇರೆ ಕ್ಲಬ್ ಸದಸ್ಯರು ಸಂಘಸಂಸ್ಥೆಗಳ ಸದಸ್ಯರು ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ, ತಾಲೂಕಿನ ಎಲ್ಲಾ ಉಪನ್ಯಾಸಕ ಶಿಕ್ಷಕ ಬಂಧುಗಳ ಸಹಕಾರ ಹೀಗೇ ಇನ್ನೂ ಹಲವಾರು ಸಂಘ ಸಂಸ್ಥೆಗಳು ತಮ್ಮ ಕಾರ್ಯದಕ್ಷತೆಯಿಂದ ಇಡೀ ರಾಜ್ಯ ಕ್ಕೆ ಮಾದರಿಯಾಗುವ ಸೇವಾ ಸಮರ್ಪಣಾಭಾವದಿಂದ ತಮ್ಮನ್ನು ತೊಡಗಿಸಿದ್ದಾರೆ‌.
ಕಾರ್ಕಳ ಉತ್ಸವ ಜನತೆಯ ಹಬ್ಬ ಸಂಭ್ರಮ ಉಲ್ಲಾಸ,ಉತ್ಸಾಹ, ಜೀವನೋತ್ಸವ ಎಂದು ಸಚಿವ ವಿ.ಸುನೀಲ್ ಕುಮಾರ್ ಅಭಿಪ್ರಾಯ ಪಡುತ್ತಾರೆ.
ಸ್ವಚ್ಛತಾ ಕಾಳಜಿಯ ಹಲವಾರು ತಂಡ ಪ್ರಮುಖ ಪ್ರಬಂಧಕರ ಉಸ್ತುವಾರಿ ಪ್ರಮುಖರ ನೇತೃತ್ವದಲ್ಲಿ ಪ್ರತೀ ಸೂರ್ಯೋದಯದಿಂದ ಪ್ರತೀ ದಿನದ 24 ಗಂಟೆ ಎಂಬಂತೆ ನಗುವಿನಿಂದಲೇ ಆಸಕ್ತಿಯಿಂದಲೇ..ಬೇನೆ ಬೇಸರಿಕೆಯಿಲ್ಲದೇ..ತಮ್ಮ ಕರ್ತವ್ಯ ವೆಂಬಂತೆ ಸ್ವಚ್ಛತೆ ಯಲ್ಲಿ ತೊಡಗಿಸಿಕೊಂಡಿದ್ದಾರೆ.ಇಡೀ ಜನತೆಯೇ ನಿಬ್ಬೆರಗಾಗುವಂತೆ ಮತ್ತೆ ಪ್ರಶಂಸಿಸುವಂತೆ ಸ್ವಚ್ಛತಾ ತಂಡ ದಶದಿಕ್ಕಿನಲ್ಲಿ ಕರ್ತವ್ಯ ದಲ್ಲಿ ನಿರತರಾಗಿದ್ದಾರೆ. ಕುಡಿಯುವ ನೀರಿನ ಸರಬರಾಜು ತಂಡಗಳ ನಿರ್ವಹಣೆಯೂ ಜನರ ದಾಹವನ್ನು ತೀರಿಸುತ್ತಲೇ ಇದೆ. ಪ್ರತೀ ವಿಭಾಗದ ಪ್ರಬಂಧಕರ ಸಂಚಾಲಕರ ಸದಸ್ಯರ ಐಕ್ಯತೆಯ ಮೊತ್ತವೇ. ಕಾರ್ಕಳ ಉತ್ಸವದ ಯಶೋಗಾಥೆಯಾಗಿದೆ.

ಕಾರ್ಕಳ ಉತ್ಸವದ ಪ್ರತಿದಿನವೂ ಅದೇ ಜೋಶ್ ಅದೇ ಖುಷ್ ಎಂಬಂತೆ ಇನ್ನುಳಿದ ಜನಸಾಗರದ ಅಮೂಲ್ಯವಾದ ವಿಶೇಷವಾದ ಕಾರ್ಯಕ್ರಮಗಳಿಂದ ರಾಜ್ಯದ ಹೊರ ರಾಜ್ಯದ ಕಡೆಯಿಂದಲೂ ಅಷ್ಟೇಕೆ ತಮ್ಮ ಬಂಧುಗಳಿಗೆ.ಖರೆ ಮಾಡಿ ವಿದೇಶಗಳಿಂದಲೂ ಬರಮಾಡಿಕೊಳ್ಳುವಂತಹ ಸಂಭ್ರಮ ಮೂಡಿ ಬಂದಿದೆ ಸಾಮಾಜಿಕ ಜಾಲತಾಣಗಳಲ್ಲಂತೂ ಕಾರ್ಕಳ ಉತ್ಸಾಹದ ಝಲಕ್ ಭಾರೀ ಸಂಖ್ಯೆಯಲ್ಲಿ ವೈರಲ್ ಆಗುತ್ತಿವೆ..ಜನತೆ ಮೊಬೈಲುಗಳ ಸ್ಟೇಟಸ್ ತುಂಬಾ ಕಾರ್ಕಳ ಉತ್ಸವದ ರಂಗು ವರ್ಣ ರಂಜಿತ ಬೆಳಕಿನ ಚಿತ್ತಾರ ವೈಭವವೇ ತುಂಬಿದೆ.ನಿರೀಕ್ಷೆಯ ಸಾಂಸ್ಕೃತಿಕ ಕಲಾ ಮೇಳ ಮೆರವಣಿಗೆ ಕಿಲೋಮೀಟರ್ ಗಳಷ್ಟು ದೂರ ಸಾಗಿ ಬರಲಿದೆ ಇದನ್ನು ನೋಡಲೇಬೇಕಾದ ಕಾತರದ ಉತ್ಸವವಾದರೆ ಸಂಘಟಕರು ಇದರ ಭರದ ಸಿದ್ಧತೆಯ ಉತ್ಸಾಹದಲ್ಲಿದ್ದಾರೆ

ಗಣೇಶ್ ಜಾಲ್ಸೂರು, ಶಿಕ್ಷಕರು ಕಾರ್ಕಳ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!