Saturday, May 21, 2022
spot_img
Homeಸುದ್ದಿKarkala Utsavaಕಾರ್ಕಳ ಉತ್ಸವ : ಗೂಡುದೀಪ ಉತ್ಸವಕ್ಕೆ ಚಾಲನೆ

ಕಾರ್ಕಳ ಉತ್ಸವ : ಗೂಡುದೀಪ ಉತ್ಸವಕ್ಕೆ ಚಾಲನೆ

ಕಾರ್ಕಳ : ಕಾರ್ಕಳ ಉತ್ಸವದ ಪ್ರಯುಕ್ತ ಆಯೋಜಿಸಲಾದ ಗೂಡುದೀಪ ಉತ್ಸವದ ಪ್ರದರ್ಶನವು ಮಾ. 16ರಂದು ಪೆರ್ವಾಜೆ ಸ.ಹಿ.ಪ್ರಾ. ಶಾಲೆಯ ದಿ. ಶಿವರಾಮ್ ಶೆಟ್ಟಿ ವೇದಿಕೆಯಲ್ಲಿ ನಡೆಯಿತು.
ಮುಖ್ಯ ಅತಿಥಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ದೈವ ನರ್ತಕ ಉಗ್ಗಪ್ಪ ಪರವ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಂಗಳೂರಿಂದ ವಿವಿಧ ವೈವಿಧ್ಯಮಯ ಗೂಡುದೀಪಗಳಾದ ಸಾಂಬಾರು ಪದಾರ್ಥಗಳಿಂದ, ಅಡಿಕೆ ಹಾಳೆ, ತೆಂಗಿನ ಗೆರಟೆಯಿಂದ ತಯಾರಿಸಿದ ಹಾಗೂ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ 126 ಶಾಲೆಗಳಲ್ಲಿ ತಯಾರಿಸಿದ ಸುಮಾರು 250ಕ್ಕೂ ಹೆಚ್ಚಿನ ವಿವಿಧ ವೈವಿಧ್ಯಮಯ ಗೂಡುದೀಪಗಳು ಪ್ರದರ್ಶನಗೊಂಡಿತು.

ಅಡಿಕೆ ಹಾಳೆಯಿಂದ ತಯಾರಾದ ಗೂಡುದೀಪ

ಪ್ರದರ್ಶನವು ಮಾ. 20ರ ವರೆಗೆ ನಡೆಯಲಿದೆ.

ಚಿಪ್ಪಿನಿಂದ ತಯಾರಾದ ಗೂಡುದೀಪ

ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ತಾಲೂಕು ಅಧ್ಯಕ್ಷೆ ಪದ್ಮಾವತಿ, ಆಶಾಕಾರ್ಯಕರ್ತೆಯರ ಅಧ್ಯಕ್ಷೆ ಶೋಭಾ ಭಂಢಾರಿ, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕಾರ್ಕಳ ಉತ್ಸವದ ಪ್ರಮುಖರಾದ ಮಹಾವೀರ ಹೆಗ್ಡೆ ಹಾಗೂ ರವೀಂದ್ರ ಕುಮಾರ್, ಪೆರ್ವಾಜೆ ಶಾಲೆಯ ಮುಖ್ಯಶಿಕ್ಷಕಿ ಹಷಿ೯ಣಿ ಹಾಗೂ ಲಕ್ಮೀ ಹೆಗಡೆ ಉಪಸ್ಥಿತರಿದ್ದರು.
ಪ್ರಮೀಳಾ ಹರೀಶ್ ಸ್ವಾಗತಿಸಿ, ವಿನಯ ರಾನಡೆ ವಂದಿಸಿದರು, ರಾಮಚಂದ್ರ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!