ಕಾರ್ಕಳ : ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿ ಮುಸ್ಲಿಂ ಸಂಘಟನೆಗಳು ಮಾ. 17ರಂದು ಕರೆ ನೀಡಿದ ಕರ್ನಾಟಕ ಬಂದ್ ಗೆ ಕಾರ್ಕಳದಾದ್ಯಂತ ಮುಸ್ಲಿಂ ಸಮುದಾಯದ ವರ್ತಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಆಭರಣದ ಅಂಗಡಿ, ಮೆಡಿಕಲ್, ಮೊಬೈಲ್ ಅಂಗಡಿಗಳು ಸೇರಿದಂತೆ ಮುಸ್ಲಿಂ ಮಾಲಕತ್ವದ ಹಲವು ಅಂಗಡಿ ಮುಂಗಟ್ಟುಗಳು ಕಾರ್ಕಳದಲ್ಲಿ ತೆರೆದಿಲ್ಲ. ಅಲ್ಲದೇ ಬಜಗೋಳಿ, ಅಜೆಕಾರು, ಬೈಲೂರು, ಬೆಳ್ಮಣ್, ಹೊಸ್ಮಾರು, ನಿಟ್ಟೆ ಸಾಣೂರು ಮುಂತಾದ ಕಡೆ ಮುಸಲ್ಮಾನರ ವ್ಯಾಪಾರ ವ್ಯವಹಾರಗಳು ಸ್ಥಗಿತಗೊಂಡಿದೆ.
ಕಾರ್ಕಳ : ಬಂದ್ ಗೆ ಮುಸ್ಲಿಂ ಸಮುದಾಯದಿಂದ ಬೆಂಬಲ
Recent Comments
ಕಗ್ಗದ ಸಂದೇಶ
on