Saturday, May 21, 2022
spot_img
Homeಕ್ರೈಂಕಳ್ಳತನಕ್ಕೆ ಯತ್ನ : ದೂರು ದಾಖಲು

ಕಳ್ಳತನಕ್ಕೆ ಯತ್ನ : ದೂರು ದಾಖಲು

ಕಾರ್ಕಳ : ಕಳ್ಳರು ಕಳ್ಳತನಕ್ಕೆ ಯತ್ನಿಸಿದ ಘಟನೆ ಕಾರ್ಕಳದ ಕಾಬೆಟ್ಟು ಎಂಬಲ್ಲಿ ಮಾ. 13ರಂದು ನಡೆದಿದೆ.
ಕಾರ್ಕಳದ ಕಾಬೆಟ್ಟು ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಕಾರ್ಯಾಗಾರ ಹಾಗೂ ಟೆಕ್‌ಲ್ಯಾಬ್‌‌ನ ಕಟ್ಟಡದ ಕಿಟಕಿ ಗಾಜುಗಳನ್ನು ಹಾಗೂ ಟೆಕ್ ಲ್ಯಾಬ್‌ನ ಒಳಗಿನ ಅಲ್ಯುಮೀನಿಯಂ ಪಾರ್ಟಿಷನ್‌ಗಳನ್ನು ಒಡೆದು ಸುಮಾರು 4 ಲಕ್ಷ ನಷ್ಟವನ್ನುಂಟು ಮಾಡಿದ್ದು, ಕಟ್ಟಡದ ಬಾಗಿಲಿನ ಬೀಗವನ್ನು ಮುರಿದು ಒಳ ಪ್ರವೇಶಿಸಿ ಕಟ್ಟಡದ ಒಳಗಿನ ಸೊತ್ತುಗಳನ್ನು ಕಳವು ಮಾಡಲು ಪ್ರಯತ್ನಿಸಿದ್ದಾರೆ ಎಂದು ನಿರ್ಮಿತಿ ಕೇಂದ್ರದ ಎಂಜಿನಿಯರ್ ಪವನ್ ಪಿ.ಡಿ ಎಂಬವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!