Wednesday, July 6, 2022
spot_img
Homeಸುದ್ದಿಹೆಲಿಟೂರಿಸಂ - 1, 194 ಮಂದಿ ವಿಹಾರ

ಹೆಲಿಟೂರಿಸಂ – 1, 194 ಮಂದಿ ವಿಹಾರ

ಕಾರ್ಕಳ : ಕಾರ್ಕಳ ಉತ್ಸವದಂಗವಾಗಿ ನಡೆದ ಹೆಲಿಟೂರಿಸಂನಲ್ಲಿ 1,194 ಮಂದಿ ವಿಹಾರ ನಡೆಸಿದರು. ಪ್ರಾರಂಭದ ದಿನ ಅಂದರೆ ಗುರುವಾರ 30 ಟ್ರಿಪ್ ಹಾರಾಟ ನಡೆಸಿದ್ದು 180 ಮಂದಿ ವಿಹಾರಿಸಿದರು. ಶುಕ್ರವಾರ 28 ಟ್ರಿಪ್‌ ನಲ್ಲಿ 168, ಶನಿವಾರ 32 ಟ್ರಿಪ್ ನಲ್ಲಿ 192, ಆದಿತ್ಯವಾರ 36 ಟ್ರಿಪ್ ನಲ್ಲಿ 216, ಸೋಮವಾರ 36 ಟ್ರಿಪ್ ನಲ್ಲಿ 216, ಮಂಗಳವಾರ 37 ಟ್ರಿಪ್ ನಲ್ಲಿ 222 ಮಂದಿ ಲೋಹದ ಹಕ್ಕಿಯಲ್ಲಿ ಹಾರಾಟ ಮಾಡಿದರು.

ಹೊಟೇಲ್‌ ಕಾರ್ಮಿಕರು, ಕೃಷಿಕರು, ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಹೆಲಿಕಾಪ್ಟರ್‌ ವಿಹಾರ ನಡೆಸಿದ್ದರು. 80 ವರ್ಷದ ಹಿರಿಯರನೇಕರು ಹೆಲಿಕಾಪ್ಟರ್‌ ವಿಹಾರ ನಡೆಸಿ ಸಂಭ್ರಮಿಸಿರುವುದು ವಿಶೇಷವಾಗಿತ್ತು.

ಸ್ವಯಂ ಸೇವಕರ ಕಾರ್ಯ
ಹೆಲಿಕಾಪ್ಟರ್‌ ಪ್ರಯಾಣಕ್ಕೆ ಉತ್ಸುಕತೆ ತೋರಿದ ಸಾವಿರಾರು ಮಂದಿ ಟಿಕೆಟ್‌ಗಾಗಿ ಕರೆ ಮಾಡುತ್ತಿದ್ದರು. ಒತ್ತಡ ಹೇರುತ್ತಿದ್ದರು. ಹೆಲಿಕಾಪ್ಟರ್‌ ವೀಕ್ಷಣೆಗೂ ಸಾವಿರಾರು ಮಂದಿ ತಾಲೂಕು ಕ್ರೀಡಾಂಗಣದತ್ತ ಧಾವಿಸುತ್ತಿದ್ದರು. ಇವರನ್ನೆಲ್ಲ ಹೆಲಿಕಾಪ್ಟರ್‌ ಸಮಿತಿ ಅತ್ಯಂತ ಉತ್ತಮ ರೀತಿಯಲ್ಲಿ ನಿಭಾಯಿಸಿದ್ದರು. ಸ್ವಯಂ ಸೇವಕರ ಕಾರ್ಯ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿತ್ತು.

“ಅಂಗಳದ ಮೇಲಿಂದ ವಿಮಾನ ಹಾರಾಟ ಮಾಡುವುದನ್ನು ನೋಡಿದ್ದೇವು. ಇದೀಗ ಮಂತ್ರಿ ಸುನಿಲ್‌ ಕುಮಾರ್‌ ಕಾರ್ಕಳ ಉತ್ಸವದ ಮೂಲಕ ಹೆಲಿಕಾಪ್ಟರ್‌ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದು ಅತೀವ ಸಂತಸ ತಂದಿದೆ. ಇದು ಮರೆಯಲಾರದ ಕ್ಷಣ.”

-ಸುಶೀಲಮ್ಮ ದಾನಶಾಲೆ

90 ವರ್ಷದ ಹಿರಿಯ ಮಹಿಳೆ

ಪೈಲಟ್ ಅವರನ್ನು ಅಭಿನಂದಿಸಿ ಬೀಳ್ಕೊಟ್ಟ ಹೆಲಿಕಾಪ್ಟರ್ ಸಮಿತಿ










---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!