Saturday, May 21, 2022
spot_img
Homeಸುದ್ದಿKarkala Utsavaಕಾರ್ಕಳ ಉತ್ಸವ - ಕಣ್ಮನ ಸೆಳೆಯುವ ಮಾದರಿ ಅರಣ್ಯ- ವಸ್ತುಪ್ರದರ್ಶನ

ಕಾರ್ಕಳ ಉತ್ಸವ – ಕಣ್ಮನ ಸೆಳೆಯುವ ಮಾದರಿ ಅರಣ್ಯ- ವಸ್ತುಪ್ರದರ್ಶನ

ಕಾರ್ಕಳ : ಕಾರ್ಕಳ ಉತ್ಸವದ ಅಂಗವಾಗಿ ಇಲ್ಲಿನ ಸ್ವರಾಜ್ ಮೈದಾನದಲ್ಲಿ ರಚಿಸಲಾದ ವಸ್ತುಪ್ರದರ್ಶನ ಮಳಿಗೆಗಳಿಗೆ ಸೋಮವಾರ ಇಂಧನ ಸಚಿವ ವಿ. ಸುನಿಲ್ ಕುಮಾರ್ ಚಾಲನೆ ನೀಡಿ ಎಲ್ಲ ಮಳಿಗೆಗಳಿಗೂ ಭೇಟಿ ನೀಡಿ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಕಾರ್ಕಳ ಉತ್ಸವದಲ್ಲಿ ನಮ್ಮ ಉಡುಪಿ ಜಿಲ್ಲೆಯ ಮಳಿಗೆಗಳಿಗೆ ಹೆಚ್ಚು ಬೆಂಬಲ ನೀಡುವ ಜೊತೆಗೆ ಇತರ ಹೊರ ಜಿಲ್ಲೆ, ಹೊರ ರಾಜ್ಯದ ಮಳಿಗೆಗಳ ಪ್ರದರ್ಶನಗಳಿಗೂ ಅವಕಾಶ ಕಲ್ಪಿಸಲಾಗಿದೆ. ವೀರ ಮರಣ ಹೊಂದಿದ ಯೋಧ ನಾಡ್ಪಾಲು ಉದಯ ಪೂಜಾರಿ ಅವರ ಸ್ಮರಣೆಗಾಗಿ ಅರಣ್ಯ ನಿಸರ್ಗಧಾಮ ನಿರ್ಮಾಣವಾಗಿದ್ದು ವಸ್ತುಪ್ರದರ್ಶನದ ವೇದಿಕೆಗೆ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಕಾರ್ಕಳ ಜಿನರಾಜ್ ಹೆಗ್ಡೆ ಅವರ ಹೆಸರನ್ನು ಇಡಲಾಗಿದೆ. ಕಾರ್ಕಳದ ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಉತ್ಸವದ ಉದ್ದಕ್ಕೂ ಸ್ಮರಿಸಿಕೊಂಡು ಉಲ್ಲೇಖಿಸಲಾಗಿದೆ. ಆ ಮೂಲಕ ಹೊಸ ಪೀಳಿಗೆಯ ಯವಕರಿಗೆ ಅಂತಹ ಮಹಾತ್ಮರನ್ನು ಪರಿಚಯಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದರು.
ಇಲ್ಲಿನ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಎ. ಕೋಟ್ಯಾನ್ ಮಾತನಾಡಿ ಪುಸ್ತಕಗಳನ್ನು ಖರೀದಿಸಿ ಲೇಖಕರಿಗೆ ಉತ್ಸವಕ್ಕೆ ಉತ್ತೇಜನ ನೀಡಿ ಎಂದರು.
ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್ ನೆಟಲ್‌ಕರ್ ಮಾತನಾಡಿ ಕಾರ್ಕಳ ಉತ್ಸವದ ಮೂಲಕ ಅರಣ್ಯದ ಕುರಿತು ಹೆಚ್ಚಿನ ಒಲವು ಮೂಡಿಸುವ ಕಾರ್ಯ ನಡೆಸಲು ಚಿಂತಿಸಲಾಗಿದೆ . ಸಚಿವ ಸುನಿಲ್ ಕುಮಾರ್ ಅವರ ಇಂತಹ ಯೋಚನೆ, ಪ್ರಯತ್ನ ಉತ್ತಮವಾದುದು ಎಂದರು.
ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ಅಧ್ಯಕ್ಷ ಮಹೇಂದ್ರ, ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ, ರಂಗಾಯಣ ನಿರ್ದೇಶಕ ಯಶವಂತ ಸರದೇಶಪಾಂಡೆ, ಕರ್ನಾಟಕ ಕರಕುಶಲ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ಮೌದ್ಗಿಲ್, ಕುಂದಾಪುರ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಉಪಸ್ಥಿತರಿದ್ದರು.
ಶಂಕರಿ ಭಟ್ ಮತ್ತು ಬಳಗ ಪ್ರಾರ್ಥನಾಗೀತೆ ಹಾಡಿದರು. ಕನ್ನಡ ಸಂಸ್ಕೃತಿ ಇಲಾಖೆಯ ಡಾ. ಎಂ.ಡಿ. ಸುದರ್ಶನ್ ಸ್ವಾಗತಿಸಿದರು. ರೆಷ್ಮಾ ಉದಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರುಣಾಕರ್ ಕೋಟ್ಯಾನ್ ನಿರೂಪಿಸಿದರು.

ಮಾದರಿ ಅರಣ್ಯಕ್ಕೆ ಎಲ್ಲೆಡೆ ಪ್ರಶಂಸೆ

ಮಂಗಳಪಾದೆ ರಸ್ತೆಯ ಪಕ್ಕದಲ್ಲಿ ಅರಣ್ಯ ಇಲಾಖೆ ಕಾರ್ಗಿಲ್ ವೀರ ಯೋಧನ ಹೆಸರಲ್ಲಿ ಮಾದರಿ ಅರಣ್ಯ ನಿರ್ಮಿಸಿದ್ದು ಇದು ಕಾರ್ಕಳ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಕಾಣುತ್ತಿದೆ. ಹಳೆ ಕಾಲದ ತೂಗು ಸೇತುವೆ, ಪ್ರಕೃತಿಯನ್ನೇ ಒಳಪಡಿಸಿಕೋಂಡ ಈ ಮಾದರಿಯಲ್ಲಿ ಕೃಷಿ, ಕಂಬಳ, ಗುಹೆ, ವನ ನಿರ್ಮಾಣ, ಕೃತಕ ಜಲಪಾತ ಇವೆಲ್ಲ ಪ್ರಕೃತಿಯನ್ನು ಉಳಿಸಿ ಬೆಳೆಸುವ ಸಂದೇಶ ಸಾರುವಂತಿದೆ.
ಇದರ ನಿರ್ಮಾಣಕ್ಕೆ ಒಂದು ತಿಂಗಳ ಸುಮಾರು 50 ಮಂದಿ ಕಾರ್ಮಿಕರ ಹಾಗೂ ೩೦ ಮಂದಿ ಸಿಬ್ಬಂದಿಯ ಪರಿಶ್ರಮ ಬಿದ್ದಿದೆ- ವಲಯ ಅರಣ್ಯಾಧಿಕಾರಿ ದಿನೇಶ್ ಜಿ.ಡಿ.
ವಸ್ತು ಪ್ರದರ್ಶನದ ಜರ್ಮನ್ ಟೆಂಟ್‌ನಲ್ಲಿ 161 ಮಳಿಗೆ ಸೇರಿಸಿ ಹೊರಗೆ 65 ಮಳಿಗೆಗಳಿವೆ. ಸರಕಾರಿ ಇಲಾಖೆ, ಖಾಸಗಿ ಮಳಿಗೆಗಳಲ್ಲಿ ವಸ್ತುಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯಿದೆ. ಮಳಿಗೆ ರಚನೆಗೆ ಸುಮಾರು 25 ಮಂದಿ ಸ್ವಯಂ ಸೇವಕರ 20 ದಿನಗಳ ಪರಿಶ್ರಮ ಕಾರಣವಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!