ಕಾರ್ಕಳ : ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಯೋಗಪಟುಗಳ ಸನ್ಮಾನ ಕಾರ್ಯಕ್ರಮ ಮಾ. 12ರಂದು ಗಾಂಧಿ ಮೈದಾನದಲ್ಲಿ ನಡೆಯಿತು.
ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಯೋಗ ಸಾಧಕರಾದ ಕೆ.ನರೇಂದ್ರ ಕಾಮತ್, ಅನ್ವಿ ಎಚ್.ಅಂಚನ್, ಮಮತಾ ಗಣೇಶ್, ಶಿಲ್ಪ ಮತ್ತು ಶಿವಾನಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಕಳ ಬಿಲ್ಲವ ಸಮಾಜ ಸೇವಕ ಸಂಘದ ಅಧ್ಯಕ್ಷ ಡಿ.ಆರ್.ರಾಜು ಕಾರ್ಯಕ್ರಮ ಉದ್ಘಾಟಿಸಿದರು.
ಉದ್ಯಮಿ ಎಸ್. ನಿತ್ಯಾನಂದ ಪೈ, ಬಜರಂಗದಳದ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್., ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ, ಮನ್ಮಥ ಜೆ. ಶೆಟ್ಟಿ ಅತ್ತೂರು, ಚೇತನ್ ಕೋಟ್ಯಾನ್ ಅತ್ತೂರು ಉಪಸ್ಥಿತರಿದ್ದರು.
