ಕಾರ್ಕಳ : ಕಾರ್ಕಳ ಉತ್ಸವದ ಐದನೇ ದಿನವಾದ ಮಾ.14 ರಂದು ನಡೆಯಲಿರುವ ಕಾರ್ಯಕ್ರಮಗಳ ವಿವರ ಇಂತಿವೆ.
ಉದ್ಘಾಟನಾ ಕಾರ್ಯಕ್ರಮ
ಮಾ. 14ರಿಂದ ಸ್ವರಾಜ್ ಮೈದಾನದಲ್ಲಿ ಜರುಗಲಿರುವ ಚಿತ್ರಸಂತೆ, ಆಹಾರೋತ್ಸವ, ಕರಕುಶಲ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಬೆಳಗ್ಗೆ 10 ಗಂಟೆಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಉದ್ಘಾಟಿಸುವರು.
ಗಾಂಧಿಮೈದಾನದಲ್ಲಿ ಸಂಜೆ 6ರಿಂದ 8.15ರ ವರೆಗೆ ಪ್ರೋ. ಕೃಷ್ಣೇಗೌಡ, ಕೂಡ್ಲಗಿ ಕೊಟ್ರೇಶ್, ಬಸವರಾಜ ಬೆನ್ನಿ, ಮಿಮಿಕ್ರಿ ಗೋಪಿಯವರಿಂದ ಕನ್ನಡ ಹಾಸ್ಯ, ರಾತ್ರಿ 8.15 ರಿಂದ 8.45ರ ವರೆಗೆ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರ ನಾಗಪುರ, ಗುಜರಾತ್, ಮಧ್ಯಪ್ರದೇಶ ಹಾಗೂ ಒಡಿಶಾ ರಾಜ್ಯಗಳ ಕಲಾವಿದರಿಂದ ಜಾನಪದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ 8.45 ರಿಂದ 11 ಗಂಟೆಯವರೆಗೆ ಕೊಲ್ಹಾಪುರ, ಮಹಾರಾಷ್ಟ್ರ ತಂಡಗಳಿಂದ ದೇಶಭಕ್ತಿಗೀತೆ ʼಜಾಗೋ ಹಿಂದೂಸ್ತಾನಿ” ಸ್ವರ ನಿನಾದ್ ಕಾರ್ಯಕ್ರಮ ಗಾಂಧಿ ಮೈದಾನದಲ್ಲಿ ನಡೆಯಲಿದೆ.
ಸ್ವರಾಜ್ ಮೈದಾನದಲ್ಲಿ ಸಂಜೆ 6.30ರಿಂದ ಕುದ್ರೊಳ್ಳಿ ಗಣೇಶ್ ತಂಡದಿಂದ ಜಾದೂ ಪ್ರದರ್ಶನ ಮತ್ತು 8.30ರಿಂದ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ರಾಜ್ಯಪಾಲರ ಭೇಟಿ
ಮಾ. 14ರ ಸಂಜೆ 5 ಗಂಟೆಗೆ ಕಾರ್ಕಳ ಉತ್ಸವಕ್ಕೆ ಕರ್ನಾಟಕ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಭೇಟಿ ನೀಡಲಿದ್ದು, ಗಾಂಧಿ ಮೈದಾನದಲ್ಲಿ ನಡೆಯಲಿರುವ 5 ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ.