ಕಾರ್ಕಳ : ಬೆಂಗಳೂರಿನ ಶ್ರೀ ಗುಂಡುರಾವ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮಲ್ಲೇಶ್ವರದಲ್ಲಿ ಅಖಿಲ ಕರ್ನಾಟಕ ಸ್ಪೋರ್ಟ್ಸ್ & ಆರ್ಟ್ಸ್ ಅಕಾಡೆಮಿ ವತಿಯಿಂದ ನಡೆದ ರಾಷ್ಟ್ರಮಟ್ಟದ ಮಾರ್ಷಲ್ಆರ್ಟ್ಸ್ ಟೇಕ್ವಾಂಡೋದಲ್ಲಿ ಕಾರ್ಕಳದ ಕ್ರೀಡಾ ಪಟುಗಳು ಪದಕ ಗೆದ್ದುಕೊಂಡಿದ್ದಾರೆ.
ಕಾರ್ಕಳ ಬಂಡೀಮಠ ದೇವಾಡಿಗ ಸಂಘ ಇಲ್ಲಿಯ ಮಾರ್ಷಲ್ಆರ್ಟ್ಸ್ ಟೇಕ್ವಾಂಡೋ ಕ್ರೀಡಾಪಟುಗಳಾದ ಪವನ್, ಸಂತೋಷ್, ಗುಣವೀರ, ಸತ್ಯಪ್ರಸಾದ್, ಸಂಜಯ್, ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.