ಕಾರ್ಕಳ : ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ಕಾರ್ಕಳದ ಬಂಗ್ಲೆಗುಡ್ಡೆ ಜಂಕ್ಷನ್ ನಲ್ಲಿ ಮಾ.12ರಂದು ನಡೆದಿದೆ.
ಗಾಯಗೊಂಡ ಬೈಕ್ ಸವಾರನನ್ನು ಅಬ್ದುಲ್ ರಹೀಮ್(58) ಎಂದು ಗುರುತಿಸಲಾಗಿದೆ.
ಅಬ್ದುಲ್ ರಹೀಮ್ ತನ್ನ ಬೈಕನ್ನು ರಸ್ತೆ ಬದಿ ನಿಲ್ಲಿಸಿ, ತಾಲೂಕು ಜಂಕ್ಷನ್ ಕಡೆಯಿಂದ ಬಂಗ್ಲೆಗುಡ್ಡೆ ಜಂಕ್ಷನ್ಕಡೆಗೆ ಸಾಗುತ್ತಿದ್ದ ಶಿವರಾಮ ನಾಯಕ್ ಎಂಬವರು ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರು ಬೈಕ್ ಗೆ ಡಿಕ್ಕಿಯಾಗಿ, ಬೈಕ್ ಮಗುಚಿಬಿದ್ದು ಅಬ್ದುಲ್ ರಹೀಮ್ ಗಾಯಗೊಂಡರು.
ಗಾಯಾಳುವನ್ನು ಕಾರು ಚಾಲಕ ಶಿವರಾಮ ನಾಯಕ್ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.