ಮಂಗಳೂರು : ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾದ ಘಟನೆ ದ.ಕ ಜಿಲ್ಲೆಯ ವಿಟ್ಲ ಸಮೀಪದ ಕೋಡಪದವು ಸರಾವು ಎಂಬಲ್ಲಿ ಮಾ.13 ರಂದು ನಡೆದಿದೆ.
ಕೆಲಿಂಜ ನಿವಾಸಿ ಸಿಟ್ರೇನ್ ಪಾಯಸ್ ರವರ ಮಾಲಕತ್ವದ ಕಾರು ಸುಟ್ಟು ಕರಕಲಾಯಿತು.
ಪಾಯಸ್ ಅವರು ಬೋಳಂತೂರಿನಿಂದ ಕೋಡಪದವು ಮೂಲಕ ವಿಟ್ಲ ಕಡೆಗೆ ಬರುತ್ತಿದ್ದ ವೇಳೆ ಕಾರಿನಲ್ಲಿ ಶಬ್ದ ಕೇಳಿಸಿಕೊಂಡಿತ್ತು. ಕೂಡಲೇ ಕಾರನ್ನು ಬದಿಗೆ ಬಂದು ನಿಲ್ಲಿಸಿ ನೋಡುತ್ತಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗಿದೆ.
ನಿನ್ನೆಯಷ್ಟೇ ಕಾರಿನ ದುರಸ್ತಿ ಕಾರ್ಯ ನಡೆದಿತ್ತು ಎನ್ನಲಾಗಿದೆ. ಘಟನೆಯಿಂದಾಗಿ ಕಾರು ಸುಟ್ಟು ಕರಕಲಾಗಿದೆ.