Thursday, May 26, 2022
spot_img
Homeಸುದ್ದಿKarkala Utsavaಸಿದ್ದವಾಗಿವೆ ವೈವಿಧ್ಯಮಯ ವಸ್ತು ಪ್ರದರ್ಶನ ಮಳಿಗೆಗಳು

ಸಿದ್ದವಾಗಿವೆ ವೈವಿಧ್ಯಮಯ ವಸ್ತು ಪ್ರದರ್ಶನ ಮಳಿಗೆಗಳು

ಕಾರ್ಕಳ : ಸಾಂಸ್ಕೃತಿಕತೆಗೆ ಸಾಕ್ಷಿಯಾಗುತ್ತಿರುವ ಕಾರ್ಕಳ ಉತ್ಸವ ಇದೀಗ ಮನಸೂರೆಗೊಳ್ಳುವ ವೈವಿಧ್ಯಮಯ ವಸ್ತುಪ್ರದರ್ಶನಕ್ಕಾಗಿ, ಸ್ವರಾಜ್ ಮೈದಾನದಲ್ಲಿ ಸುಮಾರು 250 ಮಳಿಗೆಗಳು ಸಜ್ಜಾಗುತ್ತಿವೆ.

ಏನೆಲ್ಲಾ ಇರುತ್ತೆ ?
ರಾಜ್ಯದ ವಿವಿಧ ಜಿಲ್ಲೆಗಳ ಗೊಂಬೆ, ಬಟ್ಟೆ, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ಮಡಕೆ, ಮರದ ಕೆಲಸ, ಶಿಲ್ಪಕಲೆ, ಕೃಷಿ, ಬ್ಯಾಗ್ ಮಳಿಗೆಗಳು, ಕಾಶ್ಮೀರ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಗಳಿಂದ ವಿವಿಧ ಕರ ಕುಶಲ ವಸ್ತುಗಳ ಮಳಿಗೆಗಳು, ಲಲಿತ ಕಲಾ ಅಕಾಡೆಮಿಯ ಲೈವ್ ಆರ್ಟ್, ಲೈವ್ ಕ್ಲೇ ಪ್ರದರ್ಶನ/ಮಾರಾಟ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪ್ರದರ್ಶಿಸಿ ವಿಭಾಗ ಇರಲಿವೆ.
ಇವುಗಳೊಂದಿಗೆ ರಾಜ್ಯ ಸರಕಾರದ ವಿವಿಧ ಇಲಾಖೆಗಳ ಪ್ರದರ್ಶನ ಸ್ಟಾಲ್ ಗಳು, ಅದರಲ್ಲೂ ಅರಣ್ಯ ಇಲಾಖೆಯ ಮಾದರಿ ಅರಣ್ಯ ವಸ್ತು ಪ್ರದರ್ಶನದ ಸಿದ್ದಗೊಂಡಿದ್ದು, ಈ ಮಾದರಿ ಕಾಡಿನಲ್ಲಿ ನರ್ಸರಿ, ರೇಂಜ್ ಆಫೀಸ್, ಶಾಲೆ, ಮನೆ, ಬುಟ್ಟಿ ನೇಯುವ ಹಳ್ಳಿ ಮನೆ, ಗದ್ದೆ, ಕಂಬಳ ಗದ್ದೆ, ವೀಕ್ಷಣಾ ಗೋಪುರ, ನವಗ್ರಹ ವನ, ರಾಶಿ ವನ, ನಾಗಬನ, ಕೆರೆಯ ಮೇಲೆ ತೂಗು ಸೇತುವೆ, ಜಲಪಾತ, ಗುಹೆ, ಹೊಳೆ, ಗಂಗಮೂಲ ಎಲ್ಲವೂ ಈ ಮಾದರಿ ಅರಣ್ಯದಲ್ಲಿ ಇದೆ.
ಶೌಚಾಲಯ ವ್ಯವಸ್ಥೆ
ವಸ್ತು ಪ್ರದರ್ಶನ ಸ್ಟಾಲ್ ಗಳ ಕೊನೆ ತುದಿಯಲ್ಲಿ ಮಹಿಳೆಯರಿಗೆ ಹಾಗೂ ಪುರುಷ ರಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!