ಕಾರ್ಕಳ : ಮಾ. 13 ಕಾರ್ಕಳ ಉತ್ಸವದ ನಾಲ್ಕನೇ ದಿನವಾಗಿದ್ದು ಊರ ಪರವೂರ ಜನರು ಸಾವಿರಾರು ಸಂಖ್ಯೆಯಲ್ಲಿ ಉತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇಂದಿನ ಕಾರ್ಯಕ್ರಮದ ವಿವರಗಳು ಇಂತಿವೆ.
ಕಾರ್ಕಳ ಗಾಂಧಿ ಮೈದಾನದಲ್ಲಿ ಸಂಜೆ 6ರಿಂದ 8.15ರ ವರೆಗೆ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಂಕಣಿ ಭಾವಗೀತೆ, ದೇಶಭಕ್ತಿಗೀತೆ, ಮಂಥರಲೇ ವಿಜಯು’ಯ ಎಂಬ ಕೊಂಕಣಿ ಹಾಸ್ಯ, ‘ ಯಯ್ಯಾ ಹಾಸೊಯ್ಯೂ’ ಹಾಸ್ಯ ಪ್ರಹಸನ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 8.15 -10.15ವರೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ “ತುಳುನಾಡ ಜಾನಪದ ವೈಭವ” (ತುಳುನಾಡಿನ ಪರಂಪರೆಯಲ್ಲಿನ ಹಾಸ್ಯರಸ ಸಂದೇಶ) ಕಾರ್ಯಕ್ರಮವು ಜರುಗಲಿದೆ.
ಈ ನಿಟ್ಟಿನಲ್ಲಿ, ಪರಶುಪಾಮನ ಸೃಷ್ಟಿ, ಕಲ್ಕುಡೆ ಕಲ್ಲುರ್ಟಿ ರೂಪಕ, ರಾಣಿ ಅಬ್ಬಕ್ಕನ ಹೋರಾಟ, ಕೋಟಿ ಚೆನ್ನಯ್ಯರ ಬದುಕು, ಮಹಿಷನ ಅಟ್ಟಹಾಸ, ತೆಂಬೆದ ಬಾಕ್ಯಾರು ನೃತ್ಯ, ಕಂಗೀಲು ನೃತ್ಯ, ದಶಾವತಾರದ ಸುಂದರ ಚಿತ್ರಣ, ನಂದಿನಿ ನೃತ್ಯ, ಕೃಷಿಕನ ಬದುಕು, ಕಂಬುಳದ ಗಾಂಭೀರ್ಯ, ಕೋಳಿ ಕಟ್ಟದ ಜನಪದ ಕ್ರೀಡೆ ಕಾರ್ಯಕ್ರಮಗಳು ನಡೆಯಲಿವೆ.