ಕಾರ್ಕಳ : ರಾಯಚೂರಿನ ದೇವದುರ್ಗದಲ್ಲಿ ಎಪ್ರಿಲ್ 10ರಂದು ನಡೆಯಲಿರುವ ರಾಷ್ಟ್ರಮಟ್ಟದ ಸಾಹಿತ್ಯ -ಸಾಂಸ್ಕೃತಿಕ ಸಮ್ಮೇಳನದಲ್ಲಿ ರಾಷ್ಟ್ರ ಮಟ್ಟದ ಲತಾ ಮಂಗೇಶ್ಕರ್ ಪ್ರಶಸ್ತಿ ಪಡೆಯಲಿರುವ ಕು. ಸ್ನೇಹ ಎಂ. ಅವರಿಗೆ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಅಭಿನಂದಿಸಿ ಮಾತನಾಡಿದ ಶಾಲಾ ಮುಖ್ಯಗುರು ಸುರೇಖಾ ರಾಜ್ ಅವರು, ಬಹುಮುಖ ಪ್ರತಿಭೆ ಸ್ನೇಹ ಎಂ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಶುಭಹಾರೈಸಿದರು.
ವೇದಿಕೆಯಲ್ಲಿ ಶಾಲಾ ಆಡಳಿತಾಧಿಕಾರಿ ಪೂನಂ ಕಾಮತ್, ಶಿಕ್ಷಕರಾದ ರಂಜಿತಾ ಶ್ರೀಮತಿ ಸುಪ್ರಿಯಾ ಮತ್ತು ವಿದ್ಯಾರ್ಥಿನಿಯ ಪೋಷಕರಾದ ವನಜ ಉಪಸ್ಥಿತರಿದ್ದರು.