Thursday, May 26, 2022
spot_img
Homeಸಿನೆಮಾʼಹರೀಶ ವಯಸ್ಸು 36’ ಕನ್ನಡ ಚಲನಚಿತ್ರ ಬಿಡುಗಡೆ

ʼಹರೀಶ ವಯಸ್ಸು 36’ ಕನ್ನಡ ಚಲನಚಿತ್ರ ಬಿಡುಗಡೆ

ಕಾರ್ಕಳ : ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಗುರುರಾಜ್ ಜ್ಯೇಷ್ಠ ಅವರ ಚೊಚ್ಚಲ ನಿರ್ದೇಶನದ ‘ಹರೀಶ ವಯಸ್ಸು 36’ ಕನ್ನಡ ಸಿನಿಮಾ ಮಾ. 11 ರಂದು ರಾಜ್ಯಾದ್ಯಂತ ಬಿಡುಗಡೆಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭ ಕಾರ್ಕಳದ ಪ್ಲಾನೆಟ್‌ ಥಿಯೇಟರ್‌ ನಲ್ಲಿ ನಡೆಯಿತು.

ರಂಗ ಪ್ರಶಸ್ತಿ ಪುರಸ್ಕೃತ ರಂಗಕಲಾವಿದ ಚಂದ್ರಹಾಸ ಸುವರ್ಣ ಅವರು ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಸುರೇಶ್‌ ಶಿರಂತಡ್ಕ, ಉದ್ಯಮಿಗಳಾದ ಗುರುಪ್ರಸಾದ್‌, ರಮೇಶ್‌ ಆಚಾರ್ಯ, ದಿನೇಶ್‌ ಕೆ.ಎಸ್.‌, ಅಬ್ದುಲ್‌ ಖಾಲಿ, ನಾರಾಯಣ ಆಚಾರ್ಯ, ದಿನೇಶ್‌ ಆಚಾರ್ಯ, ಸೂರ್ಯ ಪುರೋಹಿತ್‌, ಶ್ರೀಕಾಂತ್‌ ಪಡ್ರೆ, ಜ್ಯೋತಿ ರಮೇಶ್‌ ಉಪಸ್ಥಿತರಿದ್ದರು.

ಏನಿದೆ ಸಿನಿಮಾದಲ್ಲಿ?

ಕಥಾನಾಯಕ ಹಗಲುಗನಸು ಕಾಣೋ ಕನಸುಕಂಗಳ ಹುಡುಗ, ಉಂಡಾಡಿ ಗುಂಡ ಹರೀಶ ಹುಡುಗಿಯ ಅನ್ವೇಷಣೆಯಲ್ಲಿ ಇರುತ್ತಾನೆ. ಅವನ ಜೀವನದಲ್ಲಿ ನಡೆಯುವ ತಿರುವುಗಳನ್ನು ಕಥೆಯಾಗಿ ಹೆಣೆದು ಎಲ್ಲಾ ವಯೋಮಾನದ ಪ್ರೇಕ್ಷಕರಿಗಾಗಿ ನಿರ್ಮಿಸಿರುವ ಕೌಟುಂಬಿಕ ಮನರಂಜನಾ ಚಿತ್ರವೇ ‘ಹರೀಶ ವಯಸ್ಸು 36’.

ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ ಮತ್ತು ಮಂಗಳೂರಿನ ಸುಂದರ ಪರಿಸರದಲ್ಲಿ ಈ ಚಲನಚಿತ್ರವು ಚಿತ್ರೀಕರಣಗೊಂಡಿದೆ. ಶಿರ್ಡಿಸಾಯಿ ಬಾಲಾಜಿ ಫಿಲ್ಮ್ ಬ್ಯಾನರ್‌ನಲ್ಲಿ ಮೂಡಿ ಬಂದಿರುವ ಈ ಚಿತ್ರದ ನಿರ್ಮಾಪಕರು ಲಕ್ಷ್ಮೀಕಾಂತ್ ಹೆಚ್.ವಿ. ರಾವ್.

ತ್ರಿಲೋಕ್, ಚಿಂತಕುಂಟ ಶ್ರೀ ದೇವಿ, ಆರ್. ದೀಪಾ, ಹಿರಿಯ ಕಲಾವಿದ ಎಂ. ಎಸ್. ಉಮೇಶ್ ಶೆಟ್ಟಿ, ಶ್ವೇತಾ ಅರೆಹೊಳೆ, ರೋಹಿಣಿ ಜಗರಾಮ್, ಪ್ರಕಾಶ್ ತೂಮಿನಾಡು, ರಕ್ಷಣ್ ಮಡೂರ್, ಶೋಭಾ ಶೆಟ್ಟಿ, ಉಮೇಶ್ ಮಿಜಾರ್ (ಚೋಟು), ಮಂಜುಳಾ ಜನಾರ್ದನ್, ರಮೇಶ್ ರೈ ಕುಕ್ಕುವಳ್ಳಿ, ಸೌಮ್ಯ ಸುಧೀಂದ್ರ ಮತ್ತಿತರರು ತಾರಾಗಣದಲ್ಲಿದ್ದಾರೆ.

ತಾಂತ್ರಿಕ ವರ್ಗದಲ್ಲಿ ಸಂಗೀತ, ರಚನೆ, ಪರಿಕಲ್ಪನೆ, ನಿರ್ದೇಶನ ಗುರುರಾಜ್ ಜ್ಯೇಷ್ಠ, ಸಹ ನಿರ್ದೇಶನ ಅಕ್ಷತ್ ವಿಟ್ಲ, ಸಹಾಯಕ ನಿರ್ದೇಶಕರು ವಿಷ್ಣು ಜಿ., ನಿಶಿತ್ ಶೆಟ್ಟಿ, ರಂಜಿತ್ ಅಡ್ಯನಡ್ಕ, ಛಾಯಾಗ್ರಹಣ ಮೋಹನ್ ಪಡ್ರೆ ಇದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!