ಕಾರ್ಕಳ : ಕಾರ್ಕಳ ಉತ್ಸವದ ಮೂರನೇ ದಿನವಾದ ಮಾ.12ರಂದು ಕಾರ್ಕಳ ಇನ್ನಷ್ಟು ಮೆರುಗಿನ ಮೂಲಕ ಜಗಮಗಿಸಲು ಪ್ರಾರಂಭವಾಗಿದೆ.
ದೀಪಾಲಂಕಾರ ಉದ್ಘಾಟನೆ
ಕಾರ್ಕಳ ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು,ಶನಿವಾರ ಸಂಜೆ 6:30 ಕ್ಕೆ ಕಾರ್ಕಳ ಬಸ್ ನಿಲ್ದಾಣದಲ್ಲಿ ದೀಪಾಲಂಕಾರದ ಉದ್ಘಾಟನೆಯನ್ನು ಸಚಿವ ವಿ. ಸುನಿಲ್ ಕುಮಾರ್ ಮಾಡುವರು.
ಜಟಕಾಬಂಡಿ ಚಾಲನೆ
ಕಾರ್ಕಳ ಉತ್ಸವ ಮುಖ್ಯವಾಗಿ ಗಾಂಧಿ ಮೈದಾನ ಮತ್ತು ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿದ್ದು ಕಾರ್ಕಳದ ಹಲವೆಡೆ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪಾರ್ಕಿಂಗ್ ನಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಹಳಷ್ಟು ಅಂತರವಿರುವುದರಿಂದ ವೃದ್ದರು, ಮಕ್ಕಳು ಮತ್ತು ನಿಶಕ್ತರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಕಾರ್ಕಳಕ್ಕೆ ಮೈಸೂರು ಮಾದರಿಯ 10 ಜಟಕಾ ಬಂಡಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
