ಕಾರ್ಕಳ : ಕಾರ್ಕಳ ಉತ್ಸವದ ಮೂರನೇ ದಿನವಾದ ಮಾ. 12ರಂದು ನಡೆಯಲಿರುವ ಕಾರ್ಯಕ್ರಮಗಳ ವಿವರ ಇಂತಿದೆ.
ಸಂಜೆ 6 ಗಂಟೆಯಿಂದ 10.30ರ ವರೆಗೆ ಮೋಹನ್ ಸದಾಶಿವ ಅವರ ತಂಡದಿಂದ ನಾದಸ್ವರ ಕಾರ್ಯಕ್ರಮ, ಸತ್ಯನಾಪುರದ ಸಿರಿ – ಲತನಾಗರಾಜ್ ತಂಡದಿಂದ ತುಳು ನೃತ್ಯ ರೂಪಕ, ಸಸಿಹಿತ್ಲು ಯುವಕ ಮಂಡಲದಿಂದ ಜನಪದ ವೈಭವ, ಮೂಡುಬಿದ್ರೆ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದಿಂದ ಮಕ್ಕಳ ಮಾಯಾಲೋಕ, ಉಪ್ಪಿನ ಕುದುರು ಕೊಗ್ಗ ಭಾಸ್ಕರ್ ಕಾಮತ್ ಬಳಗದಿಂದ ಬೊಂಬೆಯಾಟ ಜರುಗಲಿದೆ.
ದೀಪಾಲಂಕಾರ ಉದ್ಘಾಟನೆ
ಕಾರ್ಕಳ ನಗರದಾದ್ಯಂತ ವಿದ್ಯುತ್ ದೀಪಗಳನ್ನು ಅಳವಡಿಸಿದ್ದು ಇಂದು ಸಂಜೆ 6:30 ಕ್ಕೆ ಕಾರ್ಕಳ ಬಸ್ ನಿಲ್ದಾಣದಲ್ಲಿ ದೀಪಾಲಂಕಾರ ಉದ್ಘಾಟನೆಯನ್ನು ಇಂಧನ ಸಚಿವ ವಿ. ಸುನಿಲ್ ಕುಮಾರ್ ನೆರವೇರಿಸುವರು.
ಹೆಬ್ರಿಯಲ್ಲಿ ಉತ್ಸವ
ಸಂಜೆ 6 ಗಂಟೆಯಿಂದ 8.45ರ ವರೆಗೆ ಹೆಬ್ರಿಯಲ್ಲಿ ಜಾಗೋ ಹಿಂದೂಸ್ತಾನಿ , ಸ್ವರ ನಿನಾದ್ ಕೊಲ್ಹಾಪುರ, ಮಹಾರಾಷ್ಟ್ರ ತಂಡವು ಪ್ರಸ್ತುತ ಪಡಿಸುವ ದೇಶಭಕ್ತಿಗೀತೆಗಳು, ಬೆಂಗಳೂರು ಪ್ರಹ್ಲಾದ್ ಆಚಾರ್ಯ ಅವರಿಂದ ಮಾತನಾಡುವ ಗೊಂಬೆ ಮತ್ತು ನೆರಳಿನಾಟ ಕಾರ್ಯಕ್ರಮ.
ಸಂಜೆ 9 ಗಂಟೆಯಿಂದ 10.30ರ ವರೆಗೆ ರಮೇಶ್ ಶೆಟ್ಟಿ ನೇತೃತ್ವದ ಕಲಾಶ್ರೀ ಬೆದ್ರ ತಂಡ, ಸುನಿಲ್ ನಿಲ್ಲಿಗುಡ್ಡೆ ನೇತೃತ್ದದ ತೆಲಿಕೆದ ತೆನಾಲಿ, ದಿನೇಶ್ ಪ್ರಭು ನೇತೃತ್ವದ ಪಲ್ಲವಿ ಕಲಾವಿದೆರ್ ತಂಡದಿಂದ ಬಲೆ ತೆಲಿಪಾಲೆ- ತುಳು ಹಾಸ್ಯ ಕಾರ್ಯಕ್ರಮ ನಡೆಯಲಿದೆ.