ಅಜೆಕಾರು : ಗಣೇಶ್ (34) ಎಂಬವರು ಮಾ. 11ರಂದು ಗುಡ್ಡೆಕ್ಕಿಬೆಟ್ಟಿನ ತಂಗಿ ಮನೆಯಲ್ಲಿದ್ದ ತಾಯಿಯನ್ನು ಕರೆದುಕೊಂಡು ಬರಲೆಂದು ಹೋದಾಗ, ತಂಗಿಯ ಗಂಡ ಆರೋಪಿ ಹರೀಶ್ ಮತ್ತು ಶ್ರೀಧರ್, ಬಾಲಕೃಷ್ಣ, ಅಮಿತಾ, ಲಕ್ಷ್ಮಿ, ಶ್ರೀಧರ್ ಎಂಬವರುಗಳು ಒಟ್ಟಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಣೇಶ್ ಅವರ ಮೇಲೆ ಕೋಲು, ಕಬ್ಬಿಣದ ರಾಡ್, ಹಾಗೂ ಕತ್ತಿಯನ್ನು ಹಿಡಿದುಕೊಂಡು ಬಂದು ಹಲ್ಲೆ ನಡೆಸಿದ್ದು, ಹೊರಗಡೆ ನಿಂತಿದ್ದ ಅವರ ತಾಯಿ ಗಲಾಟೆ ನಿಲ್ಲಿಸಲು ಮಧ್ಯೆ ಬಂದಿದ್ದು, ಅಮಿತಾ ರವರು ಕೈಯಲ್ಲಿ ಹಿಡಿದುಕೊಂಡಿದ್ದ ಕತ್ತಿಯು ಅವರ ತಾಯಿಯ ಬಲಮುಂಗೈಗೆ ತಾಗಿ ರಕ್ತಗಾಯವಾಗಿರುವುದಾಗಿ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರತಿದೂರು
ಅಜೆಕಾರು : ಮರ್ಣೆ ಗ್ರಾಮದ ಗುಡ್ಡೆಕ್ಕಿಬೆಟ್ಟು ನಿವಾಸಿ ಹರೀಶ್(38) ಕೂಲಿ ಕೆಲಸ ಮಾಡಿಕೊಂಡಿದ್ದು, ಮಾ. 11ರಂದು ತನ್ನ ಹೆಂಡತಿಯ ಅಣ್ಣ ಆರೋಪಿ ಗಣೇಶ್ ತಾಯಿಯನ್ನು ಕರೆದುಕೊಂಡು ಹೋಗಲು ಬಂದಿದ್ದು, ತಾಯಿಯ ಆಧಾರ್ ಕಾರ್ಡ್ ಸಹಿತ ಇತರ ದಾಖಲೆಗಳನ್ನು ತೆಗೆದುಕೊಂಡು ಬಳಿಕ ಹರೀಶ್ ಅವರಿಗೆ, ಕಂಪ್ಲೆಂಟ್ ನೀಡಿದಕ್ಕಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮನೆ ಹೆಣ್ಣು ಮಕ್ಕಳ ಮುಂದೆ ಅಶ್ಲೀಲವಾಗಿ ನಡೆದುಕೊಂಡಿದ್ದಲ್ಲದೇ ಹರೀಶ್ ಅವರನ್ನು ಕೊಲ್ಲುವುದಾಗಿ ಅವರ ತಾಯಿಯಲ್ಲಿ ಜೀವ ಬೆದರಿಕೆ ಹಾಕಿರುವುದಾಗಿ ಹರೀಶ್ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.