ಇಲ್ಲಿದೆ ಮಾಹಿತಿ
ಕಾರ್ಕಳ : ಉತ್ಸವ ಕಾರ್ಕಳ ಉತ್ಸವ ಟೈಟಲ್ ಸಾಂಗ್ ಎಲ್ಲೆಡೆ ಕೇಳಿ ಬರುತ್ತಿದೆ. ಇಷ್ಟೊಂದು ಹಿಟ್ ಸಂಗೀತ ಕಂಪೋಸ್ ಮಾಡಿರುವುದು ಯಾರೆಂದು ಬಹುಶ: ಬಹುತೇಕರಿಗೆ ಗೊತ್ತಿಲ್ಲ. ಈ ಟೈಟಲ್ ಸಾಂಗ್ ಕಂಪೋಸ್ ಮಾಡಿರುವುದು ಖ್ಯಾತ ಸಂಗೀತ ನಿರ್ದೇಶಕ, ಕಾರ್ಕಳದ ಸುನಾದ್ ಗೌತಮ್. ಹಾಡಿರುವುದು ಗೌತಮ್ ತಂಗಿ ನಿನಾದ ನಾಯಕ್ ಹಾಗೂ ರಜತ್ ಹೆಗ್ಡೆ ಬೆಂಗಳೂರು. ಸಂಗಡಿಗರಾಗಿ ನವೀನ್ ವಿಶಾರದ್ ಹಾಗೂ ಪುನೀತ್ ನಾರಾಯಣ್ ಹಾಡಿರುತ್ತಾರೆ.
ಸಚಿವ ವಿ. ಸುನಿಲ್ ಕುಮಾರ್ ಅವರು ಕಾರ್ಕಳ ಉತ್ಸವಕ್ಕಾಗಿ ಟೈಟಲ್ ಸಾಂಗ್ ಮಾಡಿಕೊಡುವಂತೆ ಕೇಳಿಕೊಂಡಿದ್ದರು. ಕಾರ್ಕಳ ಉತ್ಸವಕ್ಕೆ ಸಂಗೀತ ರಚಿಸುವ ಅವಕಾಶವನ್ನು ಅತೀವ ಸಂತಸದಿಂದಲೇ ಒಪ್ಪಿಕೊಂಡೆ. ನನ್ನ ಜೀವನದಲ್ಲಿ ಇದೊಂದು ಸ್ಮರಣೀಯವಾಗಿರಲಿದೆ.
-ಸುನಾದ್ ಗೌತಮ್

ಸುನಾದ್ ಗೌತಮ್ ಕುರಿತು
ಜೀ ಕನ್ನಡದಲ್ಲಿ ಪ್ರಸಾರವಾದ ಕುಟುಂಬ ಅವಾರ್ಡ್ಸ್ ನಲ್ಲಿ ಜೊತೆಜೊತೆಯಲಿ ಧಾರಾವಾಹಿಯ ಶೀರ್ಷಿಕೆ ಗೀತೆಗಾಗಿ ಸುನಾದ್ ಗೌತಮ್ ಅವರಿಗೆ ನೆಚ್ಚಿನ ಶೀರ್ಷಿಕೆ ಗೀತೆ ಪ್ರಶಸ್ತಿ ಒಲಿದು ಬಂದಿದೆ. ಜೊತೆಯಲ್ಲಿಯೇ ಇದೇ ಧಾರಾವಾಹಿಯ ತೆಲುಗು ರೂಪಾಂತರವಾಗಿ ಜೀ ತೆಲುಗುವಿನಲ್ಲಿ ಪ್ರಸಾರವಾಗುತ್ತಿರುವ ಪ್ರೇಮ ಎಂತ ಮಧುರಂ ನ ಸುನಾದ್ ಅವರ ಸಂಗೀತದ ಶೀರ್ಷಿಕೆ ಗೀತೆ ಕೂಡ ನೆಚ್ಚಿನ ಶೀರ್ಷಿಕೆ ಗೀತೆ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಸುನಾದ್ ಅವರು ಅವಳಿ ಪ್ರಶಸ್ತಿ ಪಡೆದಿದ್ದರು. .
ಡಿ.ಡಿ. ಚಂದನ ವಾಹಿನಿಯಲ್ಲಿನ ಕೋಟಿ ಚೆನ್ನಯ, ಉದಯ ಟಿವಿಯ ಆನಂದ ಭೈರವಿ, ಸರಯೂ, ರಾಗಾನುರಾಗ, ಜೋಜೋ ಲಾಲಿ, ದೇವಯಾನಿ ಹಾಗೂ ಈಗ ಪ್ರಸಾರವಾಗುತ್ತಿರುವ ಯಾರಿವಳು ಧಾರಾವಾಹಿಗಳಿಗೆ, ಜೀ ಕನ್ನಡದ ಜೊತೆಜೊತೆಯಲಿ, ಪರಮಾವತಾರಿ ಶ್ರೀಕೃಷ್ಣ, ಧಾರಾವಾಹಿಗಳಿಗೆ, ಕಲರ್ಸ್ ಕನ್ನಡದ ನನ್ನರಸಿ ರಾಧೆ, ಗಿಣಿರಾಮ ಧಾರಾವಾಹಿಗಳಿಗೆ ಇವರ ಸಂಗೀತ ನಿರ್ದೇಶನವಿದೆ.
ಉದಯ ವಾಹಿನಿಯ ಡಾನ್ಸ್ ಶೋ ಕಿಕ್, ಆದರ್ಶ ದಂಪತಿಗಳು, ಸುವರ್ಣವಾಹಿನಿಯ ಭರ್ಜರಿ ಕಾಮಿಡಿ ಶೋ, ಜೀ ಕುಟುಂಬ ಅವಾರ್ಡ್ ಮೊದಲಾದ ರಿಯಾಲಿಟಿ ಶೋಗಳಿಗೆ ಶೀರ್ಷಿಕೆ ಗೀತೆ ನೀಡಿರುತ್ತಾರೆ.