ಗಣಿತನಗರ: ಅಖಿಲ ಕರ್ನಾಟಕ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಅಕಾಡೆಮಿಯಿಂದ ಬೆಂಗಳೂರಿನಲ್ಲಿ ನಡೆದ ರಾಷ್ಟ ಮಟ್ಟದ ಮುಕ್ತ ಪೂಂಸ್ ಮತ್ತು ಕ್ಯೊರಗಿ ಟೇಕ್ವೊಂಡೋ ಚಾಂಪಿಯನ್ ಶಿಪ್‌ನಲ್ಲಿ ಕಾರ್ಕಳ ಜ್ಞಾನಸುಧಾದ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಶ್ರವಣ್‌ಆರ್.ಬಂಗೇರಾ ಅವರು,ಜ್ಯೂನಿಯರ್ 63 ಕೆಜಿ ವಿಭಾಗದ ಕ್ಯೊರಗಿಯಲ್ಲಿ ಚಿನ್ನ ಹಾಗೂ ಪೂಂಸ್‌ನಲ್ಲಿ ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.
ಇವರು ನಿಟ್ಟೆಯ ರಮೇಶ್‌ಎನ್.ಪಿ.ಬಂಗೇರಾ ಹಾಗೂ ನಳಿನಿ ಆರ್. ಬಂಗೇರಾ ಅವರ ಪುತ್ರ. ಇವರ ಸಾಧನೆಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್‌ಟ್ರಸ್ಟ್ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅವರು ಅಭಿನಂದಿಸಿದ್ದಾರೆ.