ಕಾರ್ಕಳ : ಕರ್ನಾಟಕ ನಾಟಕ ಅಕಾಡೆಮಿಯ 2021ನೇ ಸಾಲಿನ ವಾರ್ಷಿಕ ರಂಗಪ್ರಶಸ್ತಿಗೆ ಕಾರ್ಕಳ ಪೆರ್ವಾಜೆ ಶಿರಡಿ ಸಾಯಿ ಮಂದಿರದ ಸಂಸ್ಥಾಪಕ ಚಂದ್ರಹಾಸ ಸುವರ್ಣ ಆಯ್ಕೆ ಯಾಗಿದ್ದಾರೆ.
ಕಾರ್ಕಳ ತಾಲೂಕಿನ ಚಂದ್ರಹಾಸ ಸುವರ್ಣ ಅವರು ‘ಕಾರ್ಕಳ ಕಲಾರಂಗ’ ಸಂಸ್ಥೆಯ ಮೂಲಕ 41 ವರ್ಷದಿಂದ ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡ, ತುಳು ನಾಟಕಗಳ ಪ್ರದರ್ಶನ, 5 ವರ್ಷಕ್ಕೊಮ್ಮೆ ತುಳು ನಾಟಕ ಸ್ಪರ್ಧೆ, 10 ದಿನಗಳ ನಾಟಕೋತ್ಸವ ಹೀಗೆ ಹಲವು ಕಾರ್ಯ ಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯ 2021ನೇ ಸಾಲಿನ ರಂಗ ಪ್ರಶಸ್ತಿ ಲಭಿಸಿದೆ.
ನಾಟಕ ತಂಡಗಳನ್ನು ಕಟ್ಟಿಕೊಂಡು ಹಲವು ಕಡೆಗಳಲ್ಲಿ ನಿರಂತರ ನಾಟಕ ಪ್ರದರ್ಶನ ಮಾಡುತ್ತಾ ಬಂದಿರುವ ಸುವರ್ಣ ಅವರು ,ಕಲಾವಿದ ಶೇಖರ ಭಂಡಾರಿ ಅವರ ಮೂಲಕ 1969ರಲ್ಲಿ ಈ ಕ್ಷೇತ್ರಕ್ಕೆ ಪ್ರವೇಶ ಮಾಡಿ ಹಲವು ಯುವ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಿದ್ದಲ್ಲದೆ ಅಗತ್ಯ ತರಬೇತಿ ಕಾರ್ಯಾಗಾರಗಳನ್ನು ನಡೆಸಿದ್ದಾರೆ.