ಕಾರ್ಕಳ : ಬೈಕಿಗೆ ಕಾರು ಡಿಕ್ಕಿಯಾಗಿ ಸವಾರರಿಗೆ ಗಾಯವಾದ ಘಟನೆ ಮಾ. 9ರಂದು ನಲ್ಲೂರು ಗ್ರಾಮದ ಹುಕ್ರಟ್ಟೆ ಕ್ರಾಸ್ ಬಳಿ ನಡೆದಿದೆ
ಆಸಿಫ್ ಸಾಹೇಬ್ ಮತ್ತು ಸಹ ಸವಾರ ಬಶೀರ್ ಸಾಹೇಬ್ ಕಾರ್ಕಳದಿಂದ ನೆಲ್ಲಿಕಾರು ಕಡೆಗೆ ಸಾಗುತ್ತಿದ್ದಾಗ ಕೃಷ್ಣೇ ಗೌಡ ಎಂಬವರು ಚಲಾಯಿಸುತ್ತಿದ್ದ ಕಾರು ಸ್ಕೂಟಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು ಸವಾರನ ಬಲಕಾಲಿನ ಹಿಂಬದಿ ಮೂಳೆ ಮುರಿತವಾಗಿ, ಬಲಕೈಗೆ ತರಚಿದ ಗಾಯ ಮತ್ತು ಸಹಸವಾರನ ತಲೆಗೆ ರಕ್ತ ಗಾಯವಾಗಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.