ಮಾ. 10-16 : ಸಾಣೂರು ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ವಾರ್ಷಿಕ ಮಹೋತ್ಸವ

ಸಾಣೂರು : ಗುರುಬೆಟ್ಟು ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ವಾರ್ಷಿಕ ಮಹೋತ್ಸವ, ಮಹಾ ಚಂಡಿಕಾಹೋಮ ಮತ್ತು ಧರ್ಮದೈವಗಳ ನೇಮೋತ್ಸವ ಸಾಣೂರಿನ ಗುರುಬೆಟ್ಟುವಿನಲ್ಲಿ ಮಾ.10ರಿಂದ 16ರವರೆಗೆ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮ
ಮಾ. 10ರಂದು ಸಂಜೆ 6ರಿಂದ ವಾಸ್ತುಹೋಮ ಬಲಿ,ಸುದರ್ಶನ ಹೋಮ ನಡೆಯಲಿದೆ‌.

ಮಾ. 11ರಂದು ಬೆಳಗ್ಗೆ 9ರಿಂದ ದೇವತಾ ಪ್ರಾರ್ಥನೆ, ಪುಣ್ಯಾಹವಾಚನೆ, ಗಣಪತಿ ಹೋಮ, ಮಹಾಮ್ಮಾಯಿ ಭೈರವನಿಗೆ ಮಹಾಪೂಜೆ , ಬೆಳಗ್ಗೆ ನವಕಹೋಮ ಕಲಶಾಭಿಷೇಕ, ಆಶ್ಲೇಷಾ ಪೂಜೆ, ಬಲಿ, ನಾಗನಿಗೆ ಕಲಶಾಭಿಷೇಕ, ಶ್ರೀ ನಾಗದೇವರಿಗೆ ಮಹಾಪೂಜೆ, ಹೌಟಲ್ ತ್ತಾಯ ದೈವಕ್ಕೆ ಪನಿವಾರ ಸೇವೆ, ಮಧ್ಯಾಹ್ನ 12.30ಕ್ಕೆ ಶ್ರೀ ದೇವಿಗೆ ಮಹಾಪೂಜೆ, ಸಂಜೆ 6ರಿಂದ ಭಜನಾ ಕಾರ್ಯಕ್ರಮ, ರಾತ್ರಿ 8.30 ಕ್ಕೆ ಶ್ರೀ ದೇವಿಗೆ ಪ್ರಸನ್ನ ಪೂಜೆ, ಅನ್ನಸಂತರ್ಪಣೆ
ತುಳು ನಾಟಕ
ರಾತ್ರಿ ಗಂಟೆ 9.30ರಿಂದ ನಮ್ಮ ಕಲಾವಿದೆರ್‌ ಬೆದ್ರ ತಂಡದಿಂದ ಬಲೆ ತೆಲಿಪಾಲೆ ಖ್ಯಾತಿಯ ಉಮೇಶ್‌ ಮಿಜಾರು ನಿರ್ದೇಶನದ ಕುಸಲ್ದ ಗೊಬ್ಬು ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ.

ಮಾ. 12ರಂದು ಬೆಳಗ್ಗೆ 9 ಗಂಟೆಯಿಂದ ಅನ್ನಪೂರ್ಣ ಹೋಮ, ಮಧ್ಯಾಹ್ನ ಶ್ರೀ ದೇವಿಗೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6 ಗಂಟೆಯಿಂದ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ದೇವಿಗೆ ಪ್ರಸನ್ನ ಪೂಜೆ ನಡೆಯಲಿದೆ.

ಮಾ. 13ರಂದು ಬೆಳಗ್ಗೆ 9ರಿಂದ ಮಹಾ ಚಂಡಿಕಾ ಹೋಮ, ಮಹಾಮ್ಮಾಯಿ ಭೈರವನಿಗೆ ಮಹಾಪೂಜೆ, ಧರ್ಮ ದೈವಗಳಿಗೆ ಪಂಚಕಜ್ಜಾಯ ಸೇವೆ, ಮಧ್ಯಾಹ್ನ 12.15ಕ್ಕೆ ಪೂರ್ಣಾಹುತಿ, ಶ್ರೀ ಗಣಪತಿ ದೇವರಿಗೆ ಮತ್ತು ಶ್ರೀ ದುರ್ಗಾ ದೇವಿಗೆ ಮಹಾಪೂಜೆ, ಮಧ್ಯಾಹ್ನ 12.30ರಿಂದ ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಮಹಾಪೂಜೆ, ಮಧ್ಯಾಹ್ನ 1 ಗಂಟೆಯಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಭಜನಾ ಕಾರ್ಯಕ್ರಮ, ರಾತ್ರಿ 8.30ಕ್ಕೆ ಶ್ರೀ ದೇವಿಗೆ ಮಹಾಪೂಜೆ ನಡೆಯಲಿದೆ.

ಅಜ್ಜ ಕೊರಗಜ್ಜ ತುಳು ಯಕ್ಷಗಾನ ಬಯಲಾಟ
ರಾತ್ರಿ ಗಂಟೆ 9.30ರಿಂದ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದ ಕಟ್ಟೆ ಮೇಳದವರಿಂದ ʼಅಜ್ಜ-ಕೊರಗಜ್ಜʼ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.

ಮಾ. 14 ರಂದು ಸಂಕ್ರಮಣ ಪೂಜೆ ,ಮಾ. 15ರ ಬೆಳಗ್ಗೆ 9 ಗಂಟೆಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಧರ್ಮದೈವಗಳ ನವಕ ಪ್ರಧಾನ, ಶ್ರೀ ದೇವಿಗೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ಧರ್ಮ ದೈವಗಳ ಭಂಡಾರ ಪ್ರತಿಷ್ಟೆ, ಸಂಜೆ ಶ್ರೀ ದೇವಿಗೆ ಮಹಾಪೂಜೆ, ಅನ್ನಸಂತರ್ಪಣೆ, ಧರ್ಮ ದೈವಗಳ ಗಗ್ಗರ ಸೇವೆ, ದೈವಗಳಿಂದ ಅಮೃತ ವಾಕ್ಯ ನಡೆಯಲಿದೆ.

ಮಾ. 16ರಂದು ಬೆಳಗ್ಗೆ 9 ಗಂಟೆಗೆ ಶುದ್ಧ ಸಂಪ್ರೋಕ್ಷಣೆ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.













































error: Content is protected !!
Scroll to Top