Tuesday, May 17, 2022
spot_img
Homeಸುದ್ದಿನಿಟ್ಟೆ : ಕಿಡ್ಸ್ ಸ್ಪೋಟ್ಸ್ ಮೀಟ್ ಮತ್ತು ಉಡುಪಿ ಜಿಲ್ಲಾ ಜೂನಿಯರ್ ಕ್ರೀಡಾಪಟುಗಳ ಚ್ಯಾಂಪಿಯನ್‌...

ನಿಟ್ಟೆ : ಕಿಡ್ಸ್ ಸ್ಪೋಟ್ಸ್ ಮೀಟ್ ಮತ್ತು ಉಡುಪಿ ಜಿಲ್ಲಾ ಜೂನಿಯರ್ ಕ್ರೀಡಾಪಟುಗಳ ಚ್ಯಾಂಪಿಯನ್‌ ಶಿಪ್‌

ನಿಟ್ಟೆ: ಕ್ರೀಡೆಯಲ್ಲಿ ಆಸಕ್ತಿ ಇದ್ದ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಸಿಕ್ಕರೆ ಅವರು ಸಾಧನೆಯ ಹಾದಿ ಹಿಡಿಯುತ್ತಾರೆ. ಪ್ರತಿಯೋರ್ವ ಕ್ರೀಡಾಪಟು ತನ್ನ ಆಟವನ್ನು ಪ್ರೀತಿಸುವುದರೊಂದಿಗೆ, ತನ್ನ ಗುರುವನ್ನು ಗೌರವಿಸಬೇಕು. ಸಾಧನೆಗೆ ನಿರಂತರ ಅಭ್ಯಾಸ ಮುಖ್ಯ ಎಂದು ಅಖಿಲ ಭಾರತ ಅಂತರ್‌ ವಿಶ್ವವಿದ್ಯಾಲಯ ಮಟ್ಟದ ಚಿನ್ನದ ಪದಕ ವಿಜೇತೆ ಕರೀಷ್ಮಾ ಸನಿಲ್ ತಿಳಿಸಿದರು.

ಅವರು ನಿಟ್ಟೆ ಕ್ಯಾಂಪನ್‌ನ ಬಿ.ಸಿ ಆಳ್ವ ಕ್ರೀಡಾ ಸಂಕೀರ್ಣದಲ್ಲಿ ನಿಟ್ಟೆ ಸಮೂಹ ವಿದ್ಯಾಸಂಸ್ಥೆ ಹಾಗೂ ಉಡುಪಿ ಜಿಲ್ಲಾ ಹವ್ಯಾಸಿ ಕ್ರೀಡಾಪಟುಗಳ ಸಂಘದ ವತಿಯಿಂದ ಮಾ.8 ಮತ್ತು 9 ರಂದು ಹಮ್ಮಿಕೊಂಡಿದ್ದ ನಿಟ್ಟೆ ಕಿಡ್ಸ್ ಸ್ಪೋಟ್ಸ್ ಮೀಟ್ ಮತ್ತು ಉಡುಪಿ ಜಿಲ್ಲಾ ಜೂನಿಯರ್ ಕ್ರೀಡಾಪಟುಗಳ ಚ್ಯಾಂಪಿಯನ್‌ ಶಿಪ್‌ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್ ಎನ್ ಚಿಪ್ಳೂಣ್ಕರ್, ಗೌರವ ಅತಿಥಿ ಉಡುಪಿ ಜಿಲ್ಲಾ ಹವ್ಯಾಸಿ ಕ್ರೀಡಾಪಟುಗಳ ಸಂಘದ ಗೌರವ ಸಲಹೆಗಾರ ಅಶೋಕ್ ಅಡ್ಯಂತಾಯ ಹಾಗೂ ನಿಟ್ಟೆ ಕ್ಯಾಂಪಸ್‌ನ ಕುಲಸಚಿವ ಎ. ಯೋಗೀಶ್ ಹೆಗ್ಡೆ ಶುಭಹಾರೈಸಿದರು.

ಉಡುಪಿ ಜಿಲ್ಲಾ ಹವ್ಯಾಸಿ ಕ್ರೀಡಾಪಟುಗಳ ಸಂಘದ ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಜ್ಞಾನಸುಧಾ ವಿದ್ಯಾಸಂಸ್ಥೆಯ ಟ್ರಸ್ಟೀ ಕರುಣಾಕರ ಶೆಟ್ಟಿ, ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ .ಐ. ರಮೇಶ್ ಮಿತ್ತಂತಾಯ, ಕ್ರೀಡಾಕೂಟದ ಸಂಯೋಜನಾ ಕಾರ್ಯದರ್ಶಿ ಗಣೇಶ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿಟ್ಟೆ ಸಮೂಹ ಸಂಸ್ಥೆಯ ದೈಹಿಕ ಶಿಕ್ಷಣಾಧಿಕಾರಿ ಶ್ಯಾಮಸುಂದರ್ ಎಂ ಸ್ವಾಗತಿಸಿ, ವಿದ್ಯಾರ್ಥಿನಿ ಶ್ರೀವಾಣಿ ಪ್ರಾರ್ಥಿಸಿ,ಉಡುಪಿ ಜಿಲ್ಲಾ ಹವ್ಯಾಸಿ ಕ್ರೀಡಾಪಟುಗಳ ಸಂಘದ ಕಾರ್ಯದರ್ಶಿ ಶ್ರೀ ದಿನೇಶ್ ಕುಮಾರ್ ವಂದಿಸಿದರು.

ಕಾರ್ಕಳ ಭುವನೇಂದ್ರ ಪ್ರೌಢಶಾಲೆಯ ದೈಹಿಕ ಶಿಕ್ಷಕ ಸಂಜಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!