ಕಾರ್ಕಳ : ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಸಿಗುವ ದಿನದಂದೇ ನಾವು ಅರ್ಥಪೂರ್ಣ ಮಹಿಳಾ ದಿನವನ್ನು ಆಚರಿಸಬಹುದಾಗಿದೆ ಎಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ ಎನ್ ಚಿಪ್ಳೂಣ್ಕರ್ ಹೇಳಿದರು.
ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಾ. 8ರಂದು ರೋಟರಿ ಕ್ಲಬ್ ನಿಟ್ಟೆ ಹಾಗೂ ಐಇಇಇ ವಿಮೆನ್ ಇನ್ ಇಂಜಿನಿಯರಿಂಗ್ನ ಸಹಯೋಗದಲ್ಲಿ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿಟ್ಟೆ ಗಾಜ್ರಿಯಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ. ಕೃಷ್ಣಾನಂದ ಮಲ್ಯ ಮಾತನಾಡಿ, ಮಹಿಳಾ ದಿನಾಚರಣೆ ಎಂಬುವುದು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ಮಹಿಳಾ ಸಬಲೀಕರಣದ ಕಾರ್ಯ ಪ್ರತಿನಿತ್ಯವೂ ನಡೆಯಬೇಕಾಗಿದೆ. ಮಹಿಳೆಯರ ಆರೋಗ್ಯ ವರ್ಧನೆಗೆ ಶ್ರಮಿಸುವುದು ಅಗತ್ಯ ಎಂದರು.
ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸಿಬ್ಬಂದಿಗಳಿಗೆ ನಿಟ್ಟೆ ಗಾಜ್ರಿಯಾ ಆಸ್ಪತ್ರೆಯ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.ಅಪರಾಹ್ನ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಚಟುವಟಿಕೆ ನಡೆಯಿತು.
ರೋಟರಿ ಕ್ಲಬ್ ನಿಟ್ಟೆಯ ಮಹಿಳಾ ಪ್ರತಿನಿಧಿ ಹಾಗೂ ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕಿ ಡಾ. ವೀಣಾದೇವಿ ಶಾಸ್ತ್ರೀಮಠ್ ಸ್ವಾಗತಿಸಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಸಹಪ್ರಾಧ್ಯಾಪಕರಾದ ಶ್ರೀವಿದ್ಯಾ ಹಾಗೂ ಪದ್ಮಾವತಿ ಪ್ರಾರ್ಥಿಸಿದರು.
ಉದ್ಯಮಶೀಲ ಅಭಿವೃದ್ಧಿ ಘಟಕದ ಸಿಬ್ಬಂದಿ ಗೀತಾ ವಂದಿಸಿದರು. ಇಲೆಕ್ಟ್ರಿಕಲ್ ವಿಭಾಗದ ಸಹಪ್ರಾಧ್ಯಾಪಕಿ ಡಾ. ಸಿಫಾ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ನಿಟ್ಟೆ ಗಾಜ್ರಿಯಾ ಆಸ್ಪತ್ರೆಯ ಮೂಳೆಚಿಕಿತ್ಸಾ ತಜ್ಞ ಡಾ. ಅರವಿಂದ ಶ್ಯಾನುಭಾಗ್, ಫಿಸಿಷಿಯನ್ ಡಾ. ಯೋಗೀಶ್ ಕಿಣಿ ಹಾಗೂ ನೇತ್ರತಜ್ಞೆ ಡಾ. ಪ್ರತಿಭಾ ನಾಯಕ್ ಹಾಗೂ ಐಇಇಇ ವಿಮೆನ್ ಇನ್ ಇಂಜಿನಿಯರಿಂಗ್ನ ಪ್ರತಿನಿಧಿ ಡಾ. ಅಶ್ವಿನಿ ಬಿ ಹಾಗೂ ಮಹಿಳಾ ದಿನಾಚರಣೆಯ ಸಂಯೋಜಕಿ ಡಾ. ಪ್ರಭಾ ನಿರಂಜನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆ
Recent Comments
ಕಗ್ಗದ ಸಂದೇಶ
on