Wednesday, July 6, 2022
spot_img
Homeಸುದ್ದಿಕಾರ್ಕಳ ಭಂಡಾರಿ ಸಮಾಜ ಸಂಘ ಮತ್ತು ಭಂಡಾರಿ ಮಹಿಳಾ ಸಂಘದ ವತಿಯಿಂದ ಕು. ನಿಧಿ...

ಕಾರ್ಕಳ ಭಂಡಾರಿ ಸಮಾಜ ಸಂಘ ಮತ್ತು ಭಂಡಾರಿ ಮಹಿಳಾ ಸಂಘದ ವತಿಯಿಂದ ಕು. ನಿಧಿ ಬಿ.ಎನ್. ಅವರಿಗೆ ಸನ್ಮಾನ 

ಕಾರ್ಕಳ  :  ಕಾರ್ಕಳ ಭಂಡಾರಿ ಸಮಾಜ ಸಂಘದ ನೇತೃತ್ವದಲ್ಲಿ  ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕಾರ್ಕಳ  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ನಿಧಿ ಬಿ.ಎನ್.ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಿಧಿ ಬಿ.ಎನ್ ಅವರು  ಕಲಬುರಗಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ತರಬೇತಿ  ಪಡೆಯುವ ಸಂದರ್ಭದಲ್ಲಿ  ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿಯನ್ನು ಮತ್ತು ಮಹಿಳಾ ಹೊರಾಂಗಣ  ವಿಭಾಗದ ಅತ್ಯುತ್ತಮ ನಿರ್ವಹಣಾ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಸರಕಾರದ ಗೃಹಮಂತ್ರಿ ಅರಗ ಜ್ಞಾನೇಂದ್ರ ಅವರಿಂದ ಪಡೆದುಕೊಂಡಿದ್ದರು.

ಈ ಸಾಧನೆಗಾಗಿ ನಿಧಿ ಬಿ.ಎನ್ ಅವರನ್ನು  ಕಾರ್ಕಳ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಶೇಖರ್ ಎಚ್. ಭಂಡಾರಿ , ಅಭಿನಂದಿಸಿ ಉತ್ತಮ ಕಾರ್ಯದಕ್ಷತೆಯಿಂದ ಮುಂದಕ್ಕೆ ಇನ್ನೂ ಪದೋನ್ನತಿ ಹೊಂದಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಗೌರವ ಸಿಗುವಂತಾಗಲಿ ಎಂದು ಹಾರೈಸಿದರು. 

ಕಾರ್ಯದರ್ಶಿ ವಿಶ್ವನಾಥ ಭಂಡಾರಿ , ಗೌರವ ಅಧ್ಯಕ್ಷ ಶಶಿಧರ್ ಕಾರ್ಕಳ ,ಸವಿತಾ ಸಮಾಜದ ಅಧ್ಯಕ್ಷ ನಾಗೇಶ್ ಬಜಗೋಳಿ ಜಿಲ್ಲಾಧ್ಯಕ್ಷ ವಿಶ್ವನಾಥ ಭಂಡಾರಿ ನಿಂಜೂರು, ಮಹಿಳಾ ಸಂಘದ ಅಧ್ಯಕ್ಷೆ ಅನಿತಾ ಸದಾನಂದ ಭಂಡಾರಿ, ಕಾರ್ಯದರ್ಶಿ ರೇಷ್ಮಾ ಸುದರ್ಶನ್ ಭಂಡಾರಿ , ಗೋಪಾಲ ಭಂಡಾರಿ , ಜಿ.ವಿ. ಇಂದಿರಾ ಗೋಪಾಲ ಭಂಡಾರಿ , ನವ್ಯ ನಿತ್ಯಾನಂದ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!