ಕಾರ್ಕಳ : ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಪ್ಪಾಡಿ ನಲ್ಲೂರಿನಲ್ಲಿ ಮಾ. 8ರಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭ ಶಿಕ್ಷಣ ಇಲಾಖೆಯಲ್ಲಿ ಸಾಧನೆ ಮಾಡಿರುವ ಪ್ರಭಾವತಿ ಹೊಸ್ಮಾರು, ಸಂಗೀತ ಕ್ಷೇತ್ರದ ಸಾಧಕಿ ಆರತಿ ಪೈ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರೂಪ ರವೀಂದ್ರಶೆಟ್ಟಿ ಬಜಗೋಳಿ ಹಾಗೂ ಸಮಾಜ ಸೇವಕಿ ವನಿತಾ ನಲ್ಲೂರು ಅವರನ್ನು ಸನ್ಮಾನಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಭಾಸ್ಕರ್, ನಲ್ಲೂರು ಗ್ರಾಮ ಪಂಚಾಯತ್ ಸದಸ್ಯೆ ಗಾಯತ್ರಿ ಪ್ರಭು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೇಯಾಂಸ ಜೈನ್ ಉಪಸ್ಥಿತರಿದ್ದರು.
ಮಮತಾ ಆಚಾರ್ಯ, ಹರ್ಷಿಣಿ ಜೈನ್, ರೇಖಾ, ಮಲ್ಲಿಕಾ ಸನ್ಮಾನಿತರ ಪತ್ರ ವಾಚಿಸಿದರು. ಶಿಕ್ಷಕಿ ಪ್ರಫುಲ್ಲ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಶಿಕ್ಷಕಿ ವಿದ್ಯಾ ವಿನುತಾ ವಂದಿಸಿದರು.