Saturday, May 21, 2022
spot_img
Homeಸ್ಥಳೀಯ ಸುದ್ದಿಇಂದು ಸಚಿವ ಸುನೀಲ್ ಕುಮಾರ್ ಅವರಿಂದ ವಿವಿದೆಡೆ ಕಾರ್ಕಳ ಉತ್ಸವದ ಪೂರ್ವಭಾವಿ ಸಭೆ

ಇಂದು ಸಚಿವ ಸುನೀಲ್ ಕುಮಾರ್ ಅವರಿಂದ ವಿವಿದೆಡೆ ಕಾರ್ಕಳ ಉತ್ಸವದ ಪೂರ್ವಭಾವಿ ಸಭೆ

ಕಾರ್ಕಳ : ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು ಮಾ.9ರಂದು ಪ್ರವಾಸ ಕೈಗೊಳ್ಳಲಿದ್ದು, ಬೆಳಗ್ಗೆ ನಿಟ್ಟೆ ಪದವು ಗೃಹ ಕಚೇರಿಯಲ್ಲಿ ಯುವ ಮೋರ್ಚಾ ತಂಡದೊಂದಿಗೆ ಹಾಗೂ ಕಾರ್ಕಳ ವಿಕಾಸ ಕಚೇರಿಯಲ್ಲಿ ಎಸ್‌ಸಿ,ಎಸ್‌ಟಿ ಮೋರ್ಚಾದೊಂದಿಗೆ ಕಾರ್ಕಳ ಉತ್ಸವ ಕುರಿತ ಪೂರ್ವಭಾವಿ ಸಭೆ ನಡೆಯಲಿದೆ.

ಬೆಳಿಗ್ಗೆ 11 ಕ್ಕೆ ಹೆಬ್ರಿ ಚೈತನ್ಯ ಸಭಾಭವನದಲ್ಲಿ ಹೆಬ್ರಿ ಉತ್ಸವ ಸ್ವಚ್ಛತೆ ಕಾರ್ಯಕ್ರಮ ದಲ್ಲಿ ಭಾಗಿ, ಅಪರಾಹ್ನ 12 ಕ್ಕೆ ಕಾರ್ಕಳ ತಾಲೂಕು ಪಂಚಾಯತ್‌ನಲ್ಲಿ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಹಾಗೂ ಅಪರಾಹ್ನ  2:30ಕ್ಕೆ ಕಾರ್ಕಳ ವಿಕಾಸ ಕಚೇರಿಯಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖರೊಂದಿಗೆ ಕಾರ್ಕಳ ಉತ್ಸವ ಕುರಿತ ಪೂರ್ವಭಾವಿ ಸಭೆ ನಡೆಸಲಿದ್ದಾರೆ.

ಮಧ್ಯಾಹ್ನ 3:00ಕ್ಕೆ ಕಾರ್ಕಳ ವಿಕಾಸ ಕಚೇರಿಯಲ್ಲಿ ಕಾರ್ಕಳ ಉತ್ಸವ ಮೆರವಣಿಗೆ ಪ್ರಮುಖರೊಂದಿಗೆ ಪೂರ್ವಭಾವಿ ಸಭೆ, ಸಂಜೆ 4:00ಕ್ಕೆ ಕಾರ್ಕಳ ಗಾಂಧಿ ಮೈದಾನದಲ್ಲಿ ಕಾರ್ಕಳ ಉತ್ಸವದ ಎಲ್ಲಾ ಸಮಿತಿಗಳ ಪ್ರಮುಖರು ಮತ್ತು ಪ್ರಬಂಧಕರೊಂದಿಗೆ ಸಭೆ ನಡೆಸುವರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!