Thursday, May 26, 2022
spot_img
Homeಸುದ್ದಿವಿದ್ಯುತ್‌ ಚಾಲಿತ ವಾಹನಗಳ ರಿಚಾರ್ಜ್‌ ಕೇಂದ್ರಗಳ ಸ್ಥಾಪನೆ : ಸಚಿವ ಸುನಿಲ್‌

ವಿದ್ಯುತ್‌ ಚಾಲಿತ ವಾಹನಗಳ ರಿಚಾರ್ಜ್‌ ಕೇಂದ್ರಗಳ ಸ್ಥಾಪನೆ : ಸಚಿವ ಸುನಿಲ್‌

ಬೆಂಗಳೂರು : ವಿದ್ಯುತ್‌ ಚಾಲಿತ ವಾಹನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಂದು ಸಾವಿರ ರೀಚಾರ್ಜ್‌ ಕೇಂದ್ರಗಳನ್ನು ಸ್ಥಾಪಿಸಲು ಸರಕಾರ ಮುಂದಾಗಿದ್ದು, ಈ ಬಗ್ಗೆ ಈಗಾಗಲೇ 646 ಕಡೆ ಜಾಗಗಳನ್ನು ಗುರುತಿಸಿ ಅಳವಡಿಕೆ ಕಾರ್ಯ ನಡೆದಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್ ತಿಳಿಸಿದ್ದಾರೆ.
ಮಾ. 7ರಂದು ವಿಧಾನ ಪರಿಷತ್‌ ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಮುನಿರಾಜು ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು ರಿಚಾರ್ಜ್‌ ಸ್ಟೇಶನ್‌ ಗಳಿಗಾಗಿ ಗುರುತಿಸಿರುವ ಜಾಗಗಳೆಲ್ಲಾ, ಎಲ್ಲಾ ಜಿಲ್ಲಾ ಕೇಂದ್ರಗಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತು ಪ್ರವಾಸಿ ತಾಣಗಳಲ್ಲಿ ಬರುತ್ತದೆ. ಇದರಲ್ಲಿ ಬೆಂಗಳೂರಿನಲ್ಲೇ 130 ಸ್ಟೇಷನ್ ಗಳಿದ್ದು, ಅಳವಡಿಕೆ ಕಾರ್ಯ ಪೂರ್ಣಗೊಂಡು ಸೇವೆಗೆ ಲಭ್ಯವಾಗಿದೆ ಎಂದರು.
ವಿದ್ಯುತ್‌ ಚಾಲಿತ ವಾಹನಗಳ ಬೆಲೆ ಹೆಚ್ಚಾಗಿದ್ದು ಅದನ್ನು ಖರೀದಿಸುವವರ ಸಂಖ್ಯೆ ಕಡಿಮೆಯಾಗಿತ್ತಿದ್ದು, ದರ ಕಡಿಮೆಯಾದಲ್ಲಿ ಖರೀದಿ ಸಂಖ್ಯೆಯೂ ಹೆಚ್ಚುತ್ತದೆ, ಈ ಬಗ್ಗೆ ಕಂಪೆನಿಗಳ ಜೊತೆ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!