ಕಾರ್ಕಳ : ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮಾ. 8ರಂದು ವಿಕಾಸ ಕಚೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಈಜು ಪಟು ವಿದ್ಯಾ ಪೈ, ಯೋಗಪಟುಗಳಾದ ಅನ್ವಿ ಅಂಚನ್, ಸ್ವಪ್ನಾ, ನಾಟಿ ವೈದ್ಯೆ ಪದ್ಮಾವತಿ ಆಚಾರ್ಯ ಅವರನ್ನು ಸಚಿವ ವಿ. ಸುನಿಲ್ ಕುಮಾರ್ ಸನ್ಮಾನಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಮಹಾವೀರ ಹೆಗ್ಡೆ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಜಿಲ್ಲಾ ಮ. ಮೋ. ಪ್ರಧಾನ ಕಾರ್ಯದರ್ಶಿ ಪ್ರಮೀಳಾ ಹರೀಶ್, ಜಿಲ್ಲಾ ಉಪಾಧ್ಯಕ್ಷೆ ಸವಿತಾ ಕೋಟ್ಯಾನ್, ಮಂಡಲ ಪ್ರಧಾನ ಕಾರ್ಯದರ್ಶಿ ಜಯರಾಂ ಸಾಲಿಯಾನ್, ವಿನಯಾ ಡಿ. ಬಂಗೇರ ಮತ್ತು ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
