ಕಾರ್ಕಳ : ಕಳೆದ ಹಲವು ದಿನಗಳಿಂದ ವಿದ್ಯುತ್ ವ್ಯತ್ಯಯದಿಂದಾಗಿ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಈ ಕುರಿತು ಆಡಳಿತ ನಡೆಸುವವರ ಗಮನಕ್ಕೆ ತಂದಿದ್ದರೂ ಏನೊಂದು ಪ್ರಯೋಜನ ಆಗಿಲ್ಲ ಎಂದು ಪುರಸಭಾ ಕಾಂಗ್ರೆಸ್ ಸದಸ್ಯರು ಧರಣಿಗೆ ಕುಳಿದ ಘಟನೆ ಮಾ. 8ರಂದು ನಡೆಯಿತು.
ಪುರಸಭಾ ಸದಸ್ಯ ಶುಭೋದ ರಾವ್, ಅಶ್ಬಕ್ ಅಹಮ್ಮದ್, ಪ್ರತಿಮಾ ರಾಣೆ, ರೆಹಮತ್ ಶೇಖ್ ಧರಣಿ ನಡೆಸಿ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.
ನೀರು ಸರಬರಾಜಿನಲ್ಲಿ ವ್ಯತ್ಯಯ ಪುರಸಭೆಯಲ್ಲಿ ವಿಪಕ್ಷ ಸದಸ್ಯರ ಧರಣಿ
