Wednesday, July 6, 2022
spot_img
Homeರಾಜ್ಯರಾಜ್ಯದಲ್ಲಿ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗೆ 1 ಲಕ್ಷ ಕೋಟಿ ರೂ. ಅಗತ್ಯ - ಗೋವಿಂದ ಕಾರಜೋಳ

ರಾಜ್ಯದಲ್ಲಿ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗೆ 1 ಲಕ್ಷ ಕೋಟಿ ರೂ. ಅಗತ್ಯ – ಗೋವಿಂದ ಕಾರಜೋಳ

ರಾಜ್ಯದಲ್ಲಿ ಪ್ರಗತಿಯಲ್ಲಿರುವ ಎಲ್ಲಾ ನೀರಾವರಿ ಯೋಜನೆ ಪೂರ್ಣಗೊಳಿಸಲು ಜಲ ಸಂಪನ್ಮೂಲ ಇಲಾಖೆಗೆ ರೂ. 1 ಲಕ್ಷ ಕೋಟಿ ಹಣದ ಅಗತ್ಯವಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಪರಿಷತ್ತಿನಲ್ಲಿ ಮಾ. 7 ರಂದು ತಿಳಿಸಿದರು. ಜೆಡಿಎಸ್ ಸದಸ್ಯ ಬಿಎಂ ಫಾರೂಖ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2021-22ರಲ್ಲಿ ನಾಲ್ಕು ನೀರಾವರಿ ನಿಗಮಗಳಿಗೆ ಮೀಸಲಿಟ್ಟಿದ್ದ ರೂ. 17,410.28 ಕೋಟಿ ಅನುದಾನದಲ್ಲಿ ರೂ. 10,824.74 ಕೋಟಿ ವೆಚ್ಚ ಮಾಡಲಾಗಿದೆ. 9.998.95 ಕೋಟಿ ರೂ. ಬಿಲ್ ವಿಳಂಬವಾಗಿದೆ. 2014-15ರಲ್ಲಿ ರೂ. 786 ಕೋಟಿ ಬಾಕಿಯಿದೆ ಮತ್ತು ಅದು 2015-16ರಲ್ಲಿ ರೂ. 1,231ಕೋಟಿಗೆ ಏರಿಕೆಯಾಗಿದೆ. ಅದು ಈಗ 9,998.95 ಕೋಟಿ ಆಗಿದೆ ಎಂದು ಮಾಹಿತಿ ನೀಡಿದರು. ಕಾವೇರಿ ನೀರಾವರಿ ನಿಗಮ ಲಿಮೆಟೆಡ್ ಗೆ ರೂ. 1,355.16 ಕೋಟಿ, ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ ಗೆ ರೂ. 4,058.32 ಕೋಟಿ, ವಿಶ್ವೇಶ್ವರಯ್ಯ ಜಲ ನಿಗಮ ಲಿಮಿಟೆಡ್ ಗೆ ರೂ. 3,273. 07 ಕೋಟಿ ಹಾಗೂ ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್ ಗೆ ರೂ. 1,312.40 ಕೋಟಿ ಬಾಕಿಯಿದೆ ಎಂದರು. ನಿಗದಿತ ಸಮಯಕ್ಕೆ ಯೋಜನೆ ಅನುಷ್ಠಾನ ಆಧಾರದ ಮೇಲೆ ಸರ್ಕಾರ ಬಾಕಿ ಪಾವತಿಸುತ್ತಿದೆ. ಕೇಂದ್ರ ಅನುದಾನ , ಕುಡಿಯುವ ನೀರು ಮತ್ತು ಜಲ ಸಂರಕ್ಷಣೆ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!