Thursday, May 19, 2022
spot_img
Homeಸುದ್ದಿಉಕ್ರೇನ್ ನಲ್ಲಿ ಒಂಟಿಯಾಗಿ ಸಾವಿರ ಕಿ.ಮೀ ಪ್ರಯಾಣಿಸಿದ 11ರ ಬಾಲಕ

ಉಕ್ರೇನ್ ನಲ್ಲಿ ಒಂಟಿಯಾಗಿ ಸಾವಿರ ಕಿ.ಮೀ ಪ್ರಯಾಣಿಸಿದ 11ರ ಬಾಲಕ

ಉಕ್ರೇನ್: ಉಕ್ರೇನ್ ನ ಝಪೊರಿಜಿಯಾ ಪ್ರದೇಶದ 11 ವರ್ಷದ ಬಾಲಕ ಯುದ್ಧ ಭೂಮಿಯಲ್ಲಿ ಏಕಾಂಗಿಯಾಗಿ ಸಾವಿರ ಕಿಲೋ ಮೀಟರ್ ಪ್ರಯಾಣಿಸಿ ತನ್ನ ಸಂಬಂಧಿಕರ ಮನೆ ಸೇರಿದ್ದಾನೆ.
ಫೋಲ್ಡರ್ ಬ್ಯಾಗ್ ನಲ್ಲಿ ಟೆಲಿಫೋನ್ ನಂಬರ್, ಪಾಸ್ ಪೋರ್ಟ್ ಮತ್ತು ತಿನ್ನಲು ಆಹಾರವಿರುವ ಪೇಪರ್ ಬ್ಯಾಗ್ ನ್ನು ಬಾಲಕನ ಹೆಗಲ ಮೇಲೆ ಹಾಕಿ ಇನ್ನು ಹೊರಡು ಎಂದು ತನ್ನ ತಾಯಿ ಹೇಳಿ ಕಳಿಸಿದರೆಂದು ಬಾಲಕ ಹೇಳಿದ್ದು, ರೈಲು ಹತ್ತಿ ಗಡಿ ತಲುಪಿದ್ದಾನೆ. ಹುಡುಗ ತನ್ನ ನಗುವಿನೊಂದಿಗೆ ಗಡಿ ಕಾಯುವ ಗಾರ್ಡ್ ಗಳ ಹೃದಯವನ್ನು ಗೆದ್ದಿದ್ದು, ಆತನ ನಗು, ನಿರ್ಭಯತೆ ಮತ್ತು ಸಮರ್ಪಣೆ ಎಲ್ಲವೂ ನಿಜವಾದ ನಾಯಕನ ಗುಣಗಳು ಎಂದು ಉಕ್ರೇನಿಯನ್ ಗೃಹ ಸಚಿವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಉಕ್ರೇನ್ ವಿದೇಶಾಂಗ ಸಚಿವರು ಬಾಲಕನನ್ನು ”ದಿ ಬಿಗ್ಗೆಸ್ಟ್ ಹೀರೋ ಆಫ್ ಲಾಸ್ಟ್ ನೈಟ್” ಎಂದು ಬಣ್ಣಿಸಿದ್ದಾರೆ.
ಗಡಿ ಕಾವಲುಗಾರರು ಬಾಲಕನ ಬಳಿ ಇದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಬ್ರಾಟಿಸಾಲ್ವಾದಿಂದ ಬಂದ ಸಂಬಂಧಿಕರಿಗೆ ಬಾಲಕನನ್ನು ಹಸ್ತಾಂತರಿಸಿದ್ದಾರೆ. ಈ ವಿಚಾರ ತಿಳಿದ ಬಾಲಕನ ತಾಯಿ ಸ್ಲೋವಾಕ್ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಉಕ್ರೇನ್‌ ನಲ್ಲಿ ದಿನದಿಂದ ದಿನಕ್ಕೆ ಯುದ್ಧದ ತೀವ್ರತೆ ಹೆಚ್ಚಾಗುತ್ತಿದ್ದು, ಅನಾರೋಗ್ಯ ಪೀಡಿತ ಸಂಬಂಧಿಕರ ಆರೈಕೆಗಾಗಿ ಉಕ್ರೇನ್‌ ತೊರೆಯಲು ಆಗುವುದಿಲ್ಲ, ಇಂತಹ ಸಂದರ್ಭದಲ್ಲಿ ತಮ್ಮ ಮಗ ಸುರಕ್ಷಿತವಾಗಿರಲಿ ಎಂದು ಭಾವಿಸಿ ಈ ರೀತಿ ಮಾಡಿರುವುದಾಗಿ ಬಾಲಕನ ಪೋಷಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!