ಬೆಂಗಳೂರು : ರಾಜ್ಯದಲ್ಲಿ 5000 ಮೆಗಾ ವ್ಯಾಟ್ ಸಾಮರ್ಥ್ಯದಲ್ಲಿ ಹೈಬ್ರಿಡ್ ಪವರ್ ಪಾರ್ಕ್ ಸ್ಥಾಪನೆಯ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿರುವುದಾಗಿ ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಸಭೆಯಲ್ಲಿ ಸದಸ್ಯ ವೈ.ಎಂ.ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಕೊಪ್ಪಳ, ಧಾರವಾಡ, ಗದಗ, ವಿಜಯಪುರ, ದಾವಣಗೆರೆ, ಚಿತ್ರದುರ್ಗ, ವಿಜಯನಗರ ಮತ್ತು ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ಹೈಬ್ರಿಡ್ ಪಾರ್ಕ್ ಸ್ಥಾಪನೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇಲ್ಲಿ ಉತ್ಪಾದನೆಯಾದ ವಿದ್ಯುತ್ ಅನ್ನು ರಾಜ್ಯದ ವಿದ್ಯುತ್ ಕಂಪನಿಗಳು ಅಥವಾ ಹೊರ ರಾಜ್ಯಗಳಿಗೆ ವಿದ್ಯುತ್ ಸರಬರಾಜು ಮಾಡುವ ಬಗ್ಗೆ ಚಿಂತಿಸಿದೆ ಎಂದು ಹೇಳಿದರು.
ಕೇಂದ್ರ ಸರಕಾರದ ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ 2022ರ ನವೆಂಬರ್ ತಿಂಗಳಲ್ಲಿ ವಿಂಡ್ ಪಾರ್ಕ್ ಮತ್ತು ವಿಂಡ್ ಸೋಲಾರ್ ಹೈಬ್ರಿಡ್ ಪಾರ್ಕ್ ಪರಿಕಲ್ಪನೆ ಟಿಪ್ಪಣಿಯನ್ನು ಜಾರಿಗೊಳಿಸಿದ್ದು, ಅಂತಿಮ ಮಾರ್ಗಸೂಚಿ ಇನ್ನೂ ಬಿಡುಗಡೆಯಾಗಬೇಕಿದೆ. ಹೈಬ್ರಿಡ್ ಯೋಜನೆಗಳನ್ನು ಸೌರ, ಗಾಳಿ ಮತ್ತು ಶೇಖರಣಾ ತಂತ್ರಜ್ಞಾನಗಳನ್ನು ಮಿಶ್ರಣ ಮಾಡುವುದರಿಂದ ಉತ್ತಮ ವಿದ್ಯುತ್ ಪೂರೈಕೆಯನ್ನು ಸ್ಪರ್ಧಾತ್ಮಕ ದರದಲ್ಲಿ ನೀಡಬಹುದಾಗಿದೆ ಎಂದು ವಿವರಿಸಿದರು.
ಹೆಚ್ಚುವರಿ ವಿದ್ಯುತ್ : ಸ್ವಚ್ಚ ಮತ್ತು ಹಸಿರು ಯೋಜನೆಗಳಿಂದ ರಾಜ್ಯ ಸರಕಾರ ಹೆಚ್ಚುವರಿ ವಿದ್ಯುತ್ ಪಡೆಯುತ್ತಿದ್ದು, ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಲಭ್ಯವಿರುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹೈಬ್ರಿಡ್ ಪವರ್ಪಾರ್ಕ್ ನಿರ್ಮಾಣ : ಸಚಿವ ಸುನಿಲ್
Recent Comments
ಕಗ್ಗದ ಸಂದೇಶ
on