ಸೂರ್ಯಕಾಂತಿ ಎಣ್ಣೆಯ ಬೆಲೆ ಗಗನಕ್ಕೆ

ಬೆಂಗಳೂರು : ಉಕ್ರೇನ್‌ ಬಿಕ್ಕಟ್ಟಿನ ಕಾರಣ ರಾಜ್ಯದಲ್ಲಿ ಸೂರ್ಯಕ್ರಾಂತಿ ಎಣ್ಣೆಯ ಬೆಲೆ ಹೆಚ್ಚಳವಾಗಿದ್ದು, ಒಂದೇ ವಾರದಲ್ಲಿ ರೂ. 130 ರಿಂದ 170 ರೂ. ಗಳಿಗೆ ಏರಿಕೆಯಾಗಿದೆ.
ಭಾರತಕ್ಕೆ ಸೂರ್ಯಕಾಂತಿ ಎಣ್ಣೆಯನ್ನು ಪೂರೈಸುವಲ್ಲಿ ಉಕ್ರೇನ್‌ ಪಾತ್ರ ಮಹತ್ವದ್ದಾಗಿದ್ದು, ರಷ್ಯಾ – ಉಕ್ರೇನ್‌ ಯುದ್ಧದ ಪರಿಣಾಮ ಪೂರೈಕೆಯಲ್ಲಿ ವ್ಯಾಪಾರಿಗಳು ಅಡೆತಡೆಗಳನ್ನು ಎದುರಿಸುತ್ತಿರುವ ಕಾರಣ ಎಣ್ಣೆಯ ಬೆಲೆಯಲ್ಲಿ ಏರಿಕೆ ಕಂಡಿದೆ. ಕರ್ನಾಟಕವು 25,000 – 30,000 ಟನ್‌ ಸೂರ್ಯಕಾಂತಿ ಎಣ್ಣೆಯನ್ನು ಆಮದು ಕೊಳ್ಳುತ್ತದೆ. ಯುದ್ಧ ನಿಲ್ಲುವ ಲಕ್ಷಣ ಇಲ್ಲದೇ ಇರುವುದರಿಂದ ಮುಂಬರುವ ದಿನಗಳಲ್ಲಿ ಬೆಲೆಏರಿಕೆ ಬಿಸಿ ಇನ್ನಷ್ಟು ಹೆಚ್ಚಲಿದೆ ಎನ್ನಲಾಗಿದೆ.





























































































































































































































error: Content is protected !!
Scroll to Top