ಕಾರ್ಕಳ : ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ಧೇಶ ಸಹಕಾರ ಸಂಘದ ಚುನಾವಣೆಯಲ್ಲಿ ಸಂತೋಷ್ ರಾವ್ ನೇತೃತ್ವದ ತಂಡ ಜಯ ಗಳಿಸಿದೆ. ಮಾ. 6ರಂದು ಕುಕ್ಕುಂದೂರು ಸಹಕಾರ ಸಂಘದ ಕೇಂದ್ರ ಕಚೇರಿಯಲ್ಲಿ ಮುಂದಿ ನ 5 ವರ್ಷದ ಆಡಳಿತಾವಧಿಗಾಗಿ ನಡೆದ ಚುನಾವಣೆಯಲ್ಲಿ ಸಂತೋಷ್ ರಾವ್ ತಂಡದ 11 ಮಂದಿ ಹಾಗೂ ರವೀಂದ್ರ ನಾಯಕ್ ಅವರ ತಂಡದ ಇಬ್ಬರು ವಿಜಯಿಯಾಗಿದ್ದಾರೆ.
ಜಯದ ನಗೆ ಬೀರಿದವರು
ಸಂತೋಷ್ ರಾವ್, ವೃಷಭರಾಜ್ ಕಡಂಬ, ಯೋಗಿಶ್ ಸಾಲ್ಯಾನ್ (ಕುಕ್ಕುಂದೂರು ಪಂ. ಸದಸ್ಯರು), ಸುಷ್ಮೀತಾ ರಾವ್, ದೀಪಾ ಎಸ್. ವಾಗ್ಳೇ, ಗಣೇಶ್, ದಿನೇಶ್ ಕುಮಾರ್ ವೈ, ಸಂಜೀವ ನಾಯ್ಕ್, ಪಾಂಡುರಂಗ ನಾಯಕ್, ಸಂದೀಪ್ ನಾಯಕ್, ವಿಕ್ರಮ ಕಿಣಿ ಹಾಗೂ ರವೀಂದ್ರ ನಾಯಕ್ ಅವರ ತಂಡದ ಕುಕ್ಕುಂದೂರು ಗ್ರಾ.ಪಂ. ಉಪಾಧ್ಯಕ್ಷ ಅನಿಲ್ ಕುಮಾರ್ ಹಾಗೂ ಪುಷ್ಪರಾಜ್ ಜಯಗಳಿಸಿದ್ದಾರೆ. ಸಹಕಾರ ಇಲಾಖೆಯ ಕೆ.ಆರ್. ರೋಹಿತ್ ಚುನಾವಣಾಧಿಕಾರಿದ್ದರು.