ಕಾರ್ಕಳ : ಜೆಸಿಐ ಕಾರ್ಕಳ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಶಾಖೆ, ಮೆಡಿಕಲ್ ಅಸೋಸಿಯೇಷನ್ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಜೆಸಿಸ್ ಆಂಗ್ಲ ಮಾಧ್ಯಮ ಶಾಲೆಯ ಸಹಭಾಗಿತ್ವದೊಂದಿಗೆ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಾ. 7ರಂದು ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೋಶಾಧಿಕಾರಿ ಲಕ್ಷ್ಮೀ ಪೈ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ಡಾ. ರಾಮಚಂದ್ರ ಜೋಷಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಅನಂತ್ ಕಾಮತ್, ಗೀತಾ ಕಾಮತ್, ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಸುರೇಖಾ ರಾಜ್, ಜೇಸಿಐ ಕಾರ್ಕಳ ನಿಯೋಜಿತ ಅಧ್ಯಕ್ಷ ಡಾ. ಮುರಳೀಧರ್ ಭಟ್, ಡಾ. ದಿಶಾ ಕಿಶನ್, ಆರೋಗ್ಯ ಇಲಾಖೆಯ ಶಿವಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೆಸಿಐ ಕಾರ್ಕಳ ಅಧ್ಯಕ್ಷ ಸಂತೋಷ್ ಕುಮಾರ್ ಸ್ವಾಗತಿಸಿ, ದಿವ್ಯಾ ಸ್ಮಿತಾ ಭಟ್ ಜೆಸಿವಾಣಿ ವಾಚಿಸಿದರು. ಅನಂತ್ ಕಾಮತ್ ವಂದಿಸಿದರು. ಶ್ವೇತ ಜೈನ್ ಸಹಕರಿಸಿದರು.