ಕಾರ್ಕಳ : ಕಾರ್ಕಳ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಹೆಲಿಟೂರಿಸಂಗೆ ಟಿಕೆಟ್ ಬುಕಿಂಗ್ ಮಾ. 7ರಂದು ಪ್ರಾರಂಭಗೊಂಡಿದೆ. ಸ್ವರಾಜ್ ಮೈದಾನದಲ್ಲಿರುವ ಕಾರ್ಯಾಲಯದಲ್ಲಿ ಟಿಕೆಟ್ ಬುಕಿಂಗ್ ಕೌಂಟರ್ ತೆರೆದಿದ್ದು ಪ್ರಥಮವಾಗಿ ಅನಂತಕೃಷ್ಣ ಆಚಾರ್ ಟಿಕೆಟ್ ಪಡೆದರು. ಮೊದಲ ದಿನವೇ ಉತ್ತಮ ಸ್ಪಂದನೆ ದೊರೆತ್ತಿದ್ದು 100ಕ್ಕೂ ಮಿಕ್ಕಿ ಟಿಕೆಟ್ ಬುಕಿಂಗ್ ಆಗಿರುತ್ತದೆ. ಮಾ. 10ರಿಂದ 15ರ ವರೆಗೆ ತಾಲೂಕು ಕ್ರೀಡಾಂಗಣದಲ್ಲಿ ಹೆಲಿಟೂರಿಸಂ ಇರಲಿದ್ದು, ಮಾ. 8ರಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಟಿಕೆಟ್ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಾ. ರೋಶನ್ ಶೆಟ್ಟಿ 9845432303, ಸುಬ್ರಹ್ಮಣ್ಯ ಭಟ್ ರೆಂಜಾಳ 9945376122, ಸುದೇಶ್ ಮಲ್ಪೆ 9742507270, ರಶ್ಮಿತಾ ಶೆಟ್ಟಿ 7022605097, ಸತೀಶ್ ಗೋರೆ 9845333471 ಸಂಪರ್ಕಿಸಬಹುದಾಗಿದೆ.
