Tuesday, July 5, 2022
spot_img
Homeಸುದ್ದಿಮಹಿಳಾ ವಿಶ್ವಕಪ್ 2022: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಮಹಿಳಾ ವಿಶ್ವಕಪ್ 2022: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಮೌಂಟ್ ಮೌಂಗನುಯಿ: ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಭರ್ಜರಿ ಆರಂಭ ಪಡೆದಿದ್ದು, ಮಾ. 6ರಂದು ನಡೆದ ಪಂದ್ಯದಲ್ಲಿ ಮಿಥಾಲಿ ನೇತೃತ್ವದ ತಂಡ 107 ರನ್ ಗಳಿಂದ ಪಾಕಿಸ್ತಾನವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 244 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡ 137 ರನ್‌ಗಳಿಗೆ ಆಲೌಟ್ ಆಯಿತು.
ಭಾರತದ ಪರ ಸ್ಮೃತಿ ಮಂಧಾನ 52 ರನ್, ದೀಪ್ತಿ ಶರ್ಮಾ 40 ರನ್, ಪೂಜಾ ವಸ್ತ್ರಕರ್ 67 ರನ್ ಮತ್ತು ಸ್ನೇಹ್ ರಾಣಾ ಔಟಾಗದೆ 53 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡ 137 ರನ್‌ಗಳಿಗೆ ಆಲೌಟ್ ಆದರು. ಭಾರತದ ಪರ ಹಿರಿಯ ಆಟಗಾರ್ತಿ ಜೂಲನ್ ಗೋಸ್ವಾಮಿ ಎರಡು ವಿಕೆಟ್ ಪಡೆದರೆ, ಮೇಘನಾ ಸಿಂಗ್ ಒಂದು, ರಾಜೇಶ್ವರಿ ಗಾಯಕ್ವಾಡ್ 4, ದೀಪ್ತಿ ಶರ್ಮಾ 1, ಸ್ನೇಹ ರಾಣಾ ಎರಡು ವಿಕೆಟ್ ಪಡೆದುಕೊಂಡರು.
ಮಹಿಳಾ ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಪಾಕ್ ಪರ ಗರಿಷ್ಠ ಸ್ಕೋರ್ 30 ಆಗಿದ್ದು, ಪಾಕಿಸ್ತಾನದ ಆರಂಭಿಕ ಆಟಗಾರ್ತಿ ಸಿದ್ರಾ ಅಮೀನ್ 30 ರನ್ ಗಳಿಸಿದರೆ, ಡಯಾನಾ ಬೇಗ್ 24 ರನ್ ಕಲೆ ಹಾಕಿದರು. ಪಾಕಿಸ್ತಾನದ ಬ್ಯಾಟಿಂಗ್ ಅನ್ನು 43 ಓವರ್ ಗಳಿಗೆ ಸೀಮಿತಗೊಳಿಸಿ 137ಕ್ಕೆ ಆಲೌಟ್ ಮಾಡುವಲ್ಲಿ ಇಂಡಿಯನ್ ಬೌಲರ್ ಗಳು ಯಶಸ್ವಿಯಾದರು.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!