ಮಾಸ್ಕೋ : ರಷ್ಯಾ – ಉಕ್ರೇನ್ ಕದನ ಪ್ರಾರಂಭವಾಗಿ 11ದಿನ ಕಳೆದಿದ್ದು, ರಾಷ್ಟ್ರಗಳ ಮಧ್ಯೆ 2 ಸುತ್ತಿನ ಮಾತುಕತೆಗಳು ನಡೆದಿದ್ದರೂ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿಲ್ಲ. ರಷ್ಯಾ ಉಕ್ರೇನ್ ಮೇಲೆ ಭಾರಿ ಪ್ರಮಾಣದಲ್ಲಿ ಬಾಂಬ್ ದಾಳಿ ನಡೆಸಿ, ಅನೇಕ ನಗರಗಳು ನಾಶಗೊಂಡಿದ್ದು, ಉಕ್ರೇನ್ನಲ್ಲಿ ಅನಿಲ ಪೂರೈಕೆಯು ಸ್ಥಗಿತಗೊಂಡಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸುವ ಸಂಬಂಧ ಇದುವರೆಗೆ ಎರಡು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿದ್ದು, ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಮುಂದಿನ ಸುತ್ತಿನ ಮಾತುಕತೆ ಮಾ. 7ರಂದು ನಡೆಯಲಿದೆ. ಎರಡೂ ಕಡೆಯವರು ಕದನ ವಿರಾಮ ಮತ್ತು ನಾಗರಿಕರಿಗೆ ಸುರಕ್ಷಿತ ಮಾರ್ಗದ ಕುರಿತು ಮಾತುಕತೆ ನಡೆಸಲು ಪ್ರಯತ್ನಿಸುತ್ತೇವೆ ಎಂದು ಉಕ್ರೇನಿಯನ್ ಅಧಿಕಾರಿ ಡೇವಿಡ್ ಅರ್ಖಾಮಿಯಾ ಅವರು ತಿಳಿಸಿದ್ದಾರೆ.
ಅರ್ಖಾಮಿಯಾ ಅವರು ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿಯ ಸರ್ವೆಂಟ್ ಆಫ್ ದಿ ಪೀಪಲ್ ಪಾರ್ಟಿಯ ಸಂಸದೀಯ ಪಕ್ಷದ ಮುಖ್ಯಸ್ಥರಾಗಿದ್ದು, ರಷ್ಯಾದೊಂದಿಗೆ ಮಾತುಕತೆಗಾಗಿ ನಿಯೋಗದ ಸದಸ್ಯರಾಗಿದ್ದಾರೆ.
ಮಾ. 7 : ರಷ್ಯಾ-ಉಕ್ರೇನ್ ಮಧ್ಯೆ 3ನೇ ಸುತ್ತಿನ ಮಾತುಕತೆ
Recent Comments
ಕಗ್ಗದ ಸಂದೇಶ
on